ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ದೇವರು ನೀಡಿರುವ ಅಮೂಲ್ಯವಾದ ಪ್ರಕೃತಿಯನ್ನು ವಿಕೃತಿಗೊಳಿಸದೆ, ದೇವರಲ್ಲಿ ಧ್ಯಾನ, ಭಕ್ತಿ, ಆಧ್ಯಾತ್ಮಿಕತೆಯನ್ನು ಬೆಳೆಸಿಕೊಂಡು ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಮನ್ನಿಕೇರಿಯ ಮಹಾಂತಲಿಂಗೇಶ್ವರ ಮಠದ ಪೀಠಾಧಿಪತಿ ವಿಜಯಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಮನ್ನಿಕೇರಿಯ ಮಹಾಂತಲಿಂಗೇಶ್ವರ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಸತ್ಸಂಗ ಕಾರ್ಯಕ್ರಮದ ಸಮಾರೋಪದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಹಬ್ಬ, ಹರಿದಿನ, ಜಾತ್ರೆಗಳು ನಾಡಿನ ಸಂಸ್ಕಂತಿ, ಪರಂಪರೆಯನ್ನು ಬಿಂಬಿಸುತ್ತವೆ ಎಂದರು.
ಅವರಾದಿಯ ಮಲ್ಲಿಕಾರ್ಜುನ ಮಹಾರಾಜರು ಪ್ರವಚನ ನೀಡಿದರು. ಹುಣಶ್ಯಾಳ ಪಿಜಿಯ ನಿಜಗುಣದೇವರು, ಸಿದ್ಧಪ್ರಭು ಶಿವಾಚಾರ್ಯರು, ಗುರುಪ್ರಸಾದ ಸ್ವಾಮೀಜಿ, ವಿರೇಶ್ವರ ಸ್ವಾಮೀಜಿ, ಕೃಪಾನಂದ ಸ್ವಾಮೀಜಿ, ಶಂಕರಾನಂದ ಅವಧೂತರು, ಶಾಂತಮ್ಮ ತಾಯಿಯವರು ಮಾತನಾಡಿದರು.
ಬಾಗಲಕೋಟದ ರಾಮಾರೂಢ ಸ್ವಾಮೀಜಿ, ಸಹಜಾನಂದ ಸರಸ್ವತಿ ಸ್ವಾಮೀಜಿ, ಮಾತೋಶ್ರೀ ಹೋಗಿಶ್ವರ ತಾಯಿ, ಶಿರೋಳದ ಶಂಕರಾರೂಢ ಸ್ವಾಮೀಜಿ ಇದ್ದರು.
ಸಂಜೆ ಜರುಗಿದ ರಥೋತ್ಸವದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಭಾಗವಹಿಸಿದ್ದರು. ಭಕ್ತರು ಹಣ್ಣು, ಹೂವು, ಕಾರೀಖು, ಬತ್ತಾಸುಗಳನ್ನು ರಥಕ್ಕೆ ಅರ್ಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ