ಪ್ರಗತಿವಾಹಿನಿ ಬೆಳಗಾವಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಆಯುಷ್ಯಮಾನ ಭಾರತ ಯೋಜನೆಯ ಸೌಲಭ್ಯವನ್ನು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಜನರಿಗೆ ತಲುಪಿಸುವ ಹಾಗೂ ಅನಕೂಲ ಮಾಡುವ ದೃಷ್ಟಿಯಿಂದ ಶಾಸಕ ಅಭಯ ಪಾಟೀಲ ಇವರು ಆಯುಷ್ಯಮಾನ ಭಾರತ ಯೋಜನೆಯ ಕುರಿತು ಚರ್ಚಿಸಲು ಸೋಮವಾರ ಸಭೆ ಆಯೋಜಿಸಿದ್ದಾರೆ.
ಅಂದು ಮಧ್ಯಾಹ್ನ3 ಗಂಟೆಗೆ ಜಿಲ್ಲಾ ಆರೋಗ್ಯ ಅಧಿಕಾರಿ, ಸರಕಾರಿ ಮತ್ತು ಈ ಯೋಜನೆಗೆ ಒಳಪಡುವ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯ ವೈದ್ಯರುಗಳು ಹಾಗೂ ಸಂಬಂದಪಟ್ಟ ಅಧಿಕಾರಿಗಳ ಸಭೆಯನ್ನು ವ್ಯಾಕ್ಸಿನ್ ಡಿಪೋದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದಾರೆ.
ನಗರದ ೩ ಲಕ್ಷ ಜನರಿಗೆ ಈ ಯೋಜನೆ ಸೌಲಭ್ಯ ದೊರೆಯಲಿದ್ದು, ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿದ ಪ್ರತಿ ಬಡಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ದೊರೆಯಲಿದ್ದು, ಯೋಜನೆ ಕುರಿತು ಚರ್ಚಿಸಿ, ಬೆಳಗಾವಿ ನಗರದ ಪ್ರತಿಯೊಬ್ಬರ ಮನೆಗೆ ಈ ಯೋಜನೆ ಸೌಲಭ್ಯ ಹಾಗೂ ಮಾಹಿತಿಯನ್ನು ಮುಟ್ಟಿಸಲು ಮುಂದಿನ ದಿನಗಳಲ್ಲಿ ಪ್ರತಿ ಮನೆಗೆ ಹೋಗಿ ಮಾಹಿತಿ ನೀಡುವುದಾಗಿ ಅಭಯ ಪಾಟೀಲ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ