Latest

ಬಾಡಿಗಾರ್ಡ್ ಗಳಿಂದಲೇ ಮಾಜಿ ಕಾರ್ಪೊರೇಟರ್ ಹತ್ಯೆ…?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಬಾಡಿಗಾರ್ಡ್ ಗಳ ಮೇಲೆ ಅನುಮಾನ ವ್ಯಕ್ತವಾಗಿದೆ.

ಪೀಟರ್ (21 ) ಹಾಗೂ ಸೂರ್ಯ (19) ಎಂಬುವವರ ಮೇಲೆ ಶಂಕೆ ವ್ಯಕ್ತವಾಗಿದ್ದು, ಪೀಟರ್ ಎಂಬಾತ ರೇಖಾ ಕದಿರೇಶ್ ಬಾಡಿಗಾರ್ಡ್ ಆಗಿದ್ದ ಎನ್ನಲಾಗಿದೆ. ರೇಖಾ ಇಂದು ಬೆಳಿಗ್ಗೆ ಬಿಬಿಎಂಪಿ ವಾರ್ಡ್ ಕಚೇರಿಗೆ ಫುಡ್ ಕಿಟ್ ವಿತರಣೆಗೆ ಬಂದಿದ್ದ ವೇಳೆ ಪೀಟರ್ ಅವರ ಜೊತೆಯಿದ್ದು, ಪೀಟರ್ ಹಾಗೂ ಸಹಚರರಿಂದಲೇ ರೇಖಾ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

Home add -Advt

ಕೊಲೆಗಾಗಿ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಆರೋಪಿಗಳು, ಕಚೇರಿ ಸಿಸಿಕ್ಯಾಮರಾಗಳನ್ನು ಕೂಡ ಮೇಲ್ಭಾಗಕ್ಕೆ ತಿರುಗಿಸಿ ಸಾಕ್ಷಿ ಸಿಗದಂತೆ ಕೃತ್ಯವೆಸಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಕೃತ್ಯದ ಬಳಿಕ ಇಬ್ಬರೂ ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಮಾಜಿ ಮಹಿಳಾ ಕಾರ್ಪೊರೇಟರ್ ಬರ್ಬರ ಹತ್ಯೆ

Related Articles

Back to top button