Kannada NewsKarnataka NewsLatest
*ಸಚಿವ ಕೆ.ಜೆ ಜಾರ್ಜ್ ಎಸ್ಕಾರ್ಟ್ ವಾಹನ ಅಪಘಾತ*

ಪ್ರಗತಿವಾಹಿನಿ ಸುದ್ದಿ: ಬರ ವೀಕ್ಷಣೆಗೆ ತೆರಳಿದ್ದ ಸಚಿವ ಕೆ.ಜೆ ಜಾರ್ಜ್ ಅವರ ಬೆಂಗಾಲು ವಾಹನ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದ ಅಮೃತ ಮಹಲ್ ಬಳಿ ಈ ಘಟನೆ ನಡೆದಿದೆ. ಸಚಿವ ಕೆ.ಜೆ. ಜಾರ್ಜ್ ಅವರು ಬರ ವೀಕ್ಷಣೆಗಾಗಿ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ಅಮೃತ್ ಮಹಲ್ ಸಂವರ್ಧನ ತಳಿ ಕೇಂದ್ರದತ್ತ ವಾಹನ ತೆರಳುತ್ತಿದ್ದಾಗ, ಅವರ ಬೆಂಗಾವಲು ವಾಹನ ಕೇಂದ್ರದ ಗೇಟ್ಗೆ ಡಿಕ್ಕಿ ಹೊಡೆದಿದೆ.
ಪೊಲೀಸ್ ಜೀಪ್ನ ಚಾಲಕ ತಿರುವಿನಲ್ಲಿ ಬ್ರೇಕ್ ಹಾಕಲು ಮುಂದಾದಾಗ ಜೀಪ್ ನಿಯಂತ್ರಣ ಕಳೆದುಕೊಂಡು ಗೇಟ್ ಗೆ ಡಿಕ್ಕಿ ಹೊಡೆದಿದೆ. ಜೀಪ್ ಮುಂಭಾಗ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಎಸ್ಕಾರ್ಟ್


