Latest

ಎಕ್ಸಪ್ಲೋರ್ ಇ2ಕೆ19-ತಾಂತ್ರಿಕ ಮೇಳ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಪ್ರಥಮ ವರ್ಷದ ಇಂಜನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಅಂತರ ಕಾಲೇಜು ಎಕ್ಸಪ್ಲೋರ್ ಇ2ಕೆ19” ವಿಜ್ಞಾನ ಸಮ್ಮೇಳನವನ್ನು  ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಚೇರಮನ್‌ ಎಸ್. ಜಿ. ಸಂಬರಗಿಮಠ  ಸಮ್ಮೇಳನದ ಉದ್ಘಾಟನೆ  ಮಾಡಿದರು. ಪ್ರೊ. ಪ್ರಣವ್ ಪಿತ್ರೆ, ಡಾ. ಡಿ.ಎನ್. ಮಿಸಾಳೆ, ಪ್ರೊ. ಉದಯಸಿಂಗ್ ರಜಪೂತ, ಪ್ರೊ. ಎ.ಐ.ಪಾಟೀಲ ಮತ್ತು ಪ್ರೊ. ಎಸ್.ವ್ಹಿ. ದಳವಾಯಿ  ಮುಖ್ಯ ಅತಿಥಿಗಳಾಗಿ ಹಾಗೂ ಮೌಲ್ಯಮಾಪಕರಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಈ ಸಮ್ಮೇಳನದಲ್ಲಿ ವಿವಿಧ ಇಂಜನಿಯರಿಂಗ್ ಕಾಲೇಜುಗಳಿಂದ ಸುಮಾರು 270 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು 68 ನವೀನ ವಿಜ್ಞಾನ ಮಾದರಿಗಳನ್ನು ಈ ಸಮ್ಮೇಳನದಲ್ಲಿ ಪ್ರದರ್ಶಿಸಲಾಗಿತ್ತು. ಈ ಪ್ರದರ್ಶನದಲ್ಲಿ ಧ್ವನಿ ನಿಯಂತ್ರಣ ರೋಬೋಟ್ ವಾಹನ, ಸ್ವಯಂಚಾಲಿತ ಕಾರ್ ಪಾರ್ಕಿಂಗ್, ಎರಡು ರೈಲು ಪ್ಲಾಟಪಾರ್ಮಗಳ ನಡುವೆ ಸ್ವಯಂಚಾಲಿತ ಸೇತುವೆ, ಹೈಡ್ರೋಲಿಕ್ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಾಧನಗಳು, ಕೋನಗಳನ್ನು ಅಳೆಯುವ ಸಾಧನಗಳು, ಮೈಕ್ರೋಕಂಟ್ರೋಲರ್ ಇಲ್ಲದ ರೋಬೋಟ್, ಡಿಜಿಟಲ್ ಡೋರ್ ಲಾಕ್ ಸಿಸ್ಟಮ್ ಮುಂತಾದ ವಿಜ್ಞಾನ ಪ್ರದರ್ಶನಗಳು ಆಕರ್ಷಕವಾಗಿದ್ದವು.

ಕಾಲೇಜಿನ ಪ್ರಾಚಾರ್ಯ ಡಾ. ಸಿದ್ಧರಾಮಪ್ಪ ಇಟ್ಟಿ  ಸ್ವಾಗತಿಸಿ, ಎಕ್ಸಪ್ಲೋರ್ ಇ2ಕೆ19 ಸಮ್ಮೇಳನದ ಉದ್ದೇಶವನ್ನು ತಿಳಿಸಿದರು. ಡಾ. ಕೆ.ಬಿ.ಜಗದೀಶಗೌಡ  ವಂದನಾರ್ಪಣೆ ಸಲ್ಲಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button