Kannada NewsKarnataka NewsLatest

*BREAKING: ಬಳ್ಳಾರಿ ಗಲಭೆ: 26 ಆರೋಪಿಗಳ ಪೈಕಿ 25 ಆರೋಪಿಗಳಿಗೆ ಜಾಮೀನು ಮಂಜೂರು*

ಪ್ರಗತಿವಾಹಿನಿ ಸುದ್ದಿ: ಬಳ್ಳಾರಿಯಲ್ಲಿ ನಡೆದ ಗಲಾಟೆ ಹಾಗೂ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 26 ಆರೋಪಿಗಳಲ್ಲಿ ೨೫ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.

ಬೆಂಗಳೂರಿನ 42ನೇ ಎಸಿಜೆ ಎಂ ನ್ಯಾಯಾಲಯ 25 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ಜನವರಿ 1ರಂದು ಶಾಸಕ ಜನಾರ್ಧನ ರೆಡ್ದಿ ಮನೆ ಬಳಿ ಎರಡು ಗುಂಪುಗಲ ನಡುವೆ ಗಲಾಟೆ ನಡೆದು ಫೈರಿಂಗ್ ನಡೆದಿತ್ತು. ಗುಂಡೇಟಿಗೆ ಕಾಂಗ್ರೆಸ್ ಶಾಸಕ ರಾಜಶೇಖರ್ ಎಂಬುವವರು ಬಲಿಯಾಗಿದ್ದರು.ಈ ಪ್ರಕರಣದಲ್ಲಿ ಬಳ್ಳಾರಿ ಪೊಲೀಸರು ಸತೀಶ್ ರೆಡ್ಡಿಯ ಗನ್ ಮ್ಯಾನ್ ಗುರುಚರಣ ಸಿಂಗ್, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಒಟ್ಟು 26 ಜನರನ್ನು ಬಂಧಿಸಿದ್ದರು.

ಇದೀಗ ಆರೋಪಿ ಗುರುಚರಣ ಸಿಂಗ್ ಹೊರತುಪಡಿಸಿ ಉಳಿದ 25 ಆರೋಪಿಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ. ಗುರುಚರಣ ಸಿಂಗ್ ಗನ್ ನಿಂದ ಹಾರಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button