Latest

ಎತ್ತ ಸಾಗುತ್ತಿದೆ ವಿತ್ತೀಯ ವಲಯ?

-ಕೆ.ಜಿ.ಕೃಪಾಲ್, ಆರ್ಥಿಕ ಅಂಕಣಕಾರರು

* ಬ್ಯಾಂಕ್ ಗಳ ಖಾತೆಯಲ್ಲಿರುವ ನಮ್ಮ ಹಣವನ್ನು ಹಿಂದೆ ಪಡೆಯಲು ಎ ಟಿ ಎಂ ಬಳಸಿದರೆ ಶುಲ್ಕ ವಿಧಿಸುವುದು, ಡಿಜಿಟಲೈಸೇಶನ್ ಎಂಬ ಬೊಬ್ಬೆಗೆ ಜನ ಸಾಮಾನ್ಯರನ್ನು ಬಲಿಪಶುಮಾಡಿದಂತಲ್ಲವೇ?

* ಹಿತಾಸಕ್ತ ಚಟುವಟಿಕೆಯ ಕಾರಣ ಬಿಗ್ ಬುಲ್ ಹಗರಣದ ಇತ್ಯರ್ಥದಲ್ಲಿ ಸೆಬಿ ಗೆ ರೂ.2.48 ಲಕ್ಷ ದಂಡ ಪಾವತಿಮಾಡಿರುವುದು.

* ಸೆನ್ಸೆಕ್ಸ್ ನ ಅಂಗವಾಗಿರುವ ಫಾರ್ಮ ಕಂಪನಿಯ ಪ್ರವರ್ತಕರ ವಿರುದ್ಧ ಹಿತಾಸಕ್ತ ಪ್ರಕರಣವನ್ನು ಪುನಃ ತನಿಖೆಗೊಳಪಡಿಸುವುದು.

* ಯಸ್ ಬ್ಯಾಂಕ್ ನ ಷೇರಿನ ಬೆಲೆ ರೂ.400 ರ ಸುಮಾರಿನಿಂದ ರೂ.150 ಕ್ಕೆ ಕುಸಿದ ಮೇಲೆ ಕಂಪನಿಯ ನೀತಿಪಾಲನೆಯ ಲೋಪದ ಕಾರಣ ಅದರ ಮುಖ್ಯಸ್ಥರನ್ನು ಮುಂದುವರೆಯಲು
ಬಿಡಲಿಲ್ಲವೆಂಬ ಆರ್ ಬಿ ಐ ನಿರ್ಧಾರ ಬಯಲು.

* ಮೂಲಾಧಾರಿತ ಪೇಟೆಯ ಚುಕ್ತಾ ಚಕ್ರದ ಕೊನೆ ದಿನ ಅಲ್ಕೆಮ್ ಲ್ಯಾಬ್ ಷೇರಿನ ಬೆಲೆ ಬಿ ಎಸ್ ಸಿ ಮತ್ತು ಎನ್ ಎಸ್ ಇ ಗಳ ಬೆಲೆಗಳಲ್ಲಿ ಸುಮಾರು ರೂ.60 ರಿಂದ 70 ರ ಅಂತರವಿತ್ತು.

*ಸರ್ಕಾರಿ ಸಾಲಪತ್ರಗಳು ಮತ್ತು ಖಜಾನೆ ಬಿಲ್ ಗಳಲ್ಲಿ ಸಣ್ಣ ಹೂಡಿಕೆದಾರರು ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಬಾಂಬೆ ಷೇರು ವಿನಿಮಯ ಕೇಂದ್ರವು ‘ ಬಿ ಎಸ್ ಇ-ಡೈರೆಕ್ಟ್ ‘ ಎಂಬ ವೇದಿಕೆಯನ್ನು ಸಿದ್ಧಗೊಳಿಸಿದೆ. ಈ ವೇದಿಕೆಯು ಸೋಮವಾರದಿಂದ ಕಾರ್ಯವನ್ನಾರಂಭಿಸಲಿದೆ.

* ತೈಲ ಮಾರಾಟ ಕಂಪನಿಗಳ ಷೇರುಗಳ ಬೆಲೆ ಕಚ್ಚಾ ತೈಲಬೆಲೆ, ಡಾಲರ್ ಬೆಲೆ ಕುಸಿಯುತ್ತಿದ್ದರೂ, ಸೂಕ್ತವಾದ ಖರೀದಿಯ ಬೆಂಬಲ ಪಡೆಯುತ್ತಿಲ್ಲ.

* ಕಳೆದೆರಡು ತ್ರೈಮಾಸಿಕಗಳಲ್ಲಿ ಹಾನಿಗೊಳಗಾಗಿರುವ ಭಾರ್ತಿ ಏರ್ಟೆಲ್ ಕಂಪನಿಯ ರೂ.5 ರ ಮುಖಬೆಲೆಯ ಷೇರಿನ ಬೆಲೆ .ರೂ.313 ರಲ್ಲಿರುವುದು, ಪ್ರತಿ ಷೇರಿಗೆ ಎಪ್ಪತ್ತು ಪೈಸೆ ಲಾಭಾಂಶ ನೀಡುವ ರೂ.5 ರ ಮುಖಬೆಲೆಯ ಕೋಟಕ್ ಮಹಿಂದ್ರಾ ಬ್ಯಾಂಕ್ ರೂ.1,230 ರಲ್ಲಿರುವುದು, ಹೆಚ್ಚು ಹೆಚ್ಚು ಲಾಭಗಳಿಸುವ, ಅಧಿಕ ಲಾಭಾಂಶ ಮತ್ತಿತರ ಕಾರ್ಪೊರೇಟ್ ಫಲಗಳನ್ನು ವಿತರಿಸುವ ಇಂಡಿಯನ್ ಆಯಿಲ್ ಷೇರಿನ ಬೆಲೆ ರೂ.135 ರಲ್ಲಿರುವುದು ವಿಸ್ಮಯಕಾರಿಯಲ್ಲವೇ?

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button