Belagavi NewsBelgaum NewsCrimeKannada NewsKarnataka NewsNationalPolitics

*ಲಾಂಗ್ ಬಳಸಿ ಕೇಕ್ ಕತ್ತಿರಿಸಿದವರಿಗೆ ಲಗಾಮು ಹಾಕಿದ ಬೆಳಗಾವಿ ಖಾಕಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನ್ಮ ದಿನಾಚರಣೆ ವೇಳೆ ಲಾಂಗು ಬಳಸಿ ರಿಲ್ಸ್ ಮಾಡಿದ ಯುವಕರ ಮೇಲೆ ಬೆಳಗಾವಿ ಪೊಲೀಸ್ ಕಾನೂನು ಕ್ರಮ ಜರುಗಿಸಿದ್ದಾರೆ.

ಫೆ. 24 ರಂದು ಜೈದ್ ನೂರಅಹಮ್ಮದ ಸನದಿ ಹಾಗೂ ತಬ್ರೇಜ್ ಹನೀಫ್ ಖಾದ್ರಿ ಬೈಕ್ ಮೇಲೆ ಸ್ಟೈಲಿಶ್ ಆಗಿ ಬಂದು ಎಂ ಕೆ ಹುಬ್ಬಳ್ಳಿ ಪಟ್ಟಣದ ಹೊರ ವಲಯದಲ್ಲಿರುವ ಎನ್‌ಎಚ್-48 ರಸ್ತೆ ಪಕ್ಕದ ಎಚ್‌ಪಿ ಪೆಟ್ರೋಲ್ ಪಂಪ್ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿ,  ಕೇಕ್‌ಗಳನ್ನು ಇಟ್ಟು ಯಾವುದೇ ಅನುಮತಿಯನ್ನು ಪಡೆಯದೇ ಸಾರ್ವಜನಿಕ ಸ್ಥಳದಲ್ಲಿ ಖಡ್ಗ ತೆಗೆದು ಖಡ್ಗದಿಂದ ಕೇಕ್‌ಗಳನ್ನು ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.

Home add -Advt

ಬಳಿಕ ಹುಟ್ಟು ಹಬ್ಬ ಆಚರಿಸಿದ ವಿಡಿಯೋವನ್ನು ರೆಹಾನ್ ಮುಸ್ತಾಕ ಅಹ್ಮದ ಬಡೇಘರ ಎಂಬುವರು ತನ್ನ ಇನ್‌ಸ್ಟಾಗ್ರಾಂ ಖಾತೆ ಅಪ್‌ಲೋಡ್ ಮಾಡಿದ್ದಾನೆ.

 ಈ ಬಗ್ಗೆ ಕಿತ್ತೂರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 68/2026 ಕಲಂ 25 27 ಭಾರತೀಯ ಆಯುಧ ಕಾಯ್ದೆ 1959 ನೇದ್ದರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ಮಾನ್ಯ ನ್ಯಾಯಾಂಗ ಬಂಧನಕ್ಕೆ ಕಳಹಿಸಲಾಗಿದೆ.

Related Articles

Back to top button