ಪ್ರಗತಿವಾಹಿನಿ ಸುದ್ದಿ, ಗೋಕಾಕ
ಪಹಣಿ ಪತ್ರಿಕೆ ತಿದ್ದುಪಡಿಗೆ 15ಸಾವಿರ ರೂ. ಬೇಡಿಕೆ ಇಟ್ಟಿದ್ದ ಭೂ ಸುಧಾರಣಾ ವಿಭಾಗದ ಸಹಾಯಕ ಶನಿವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ವಿಭಾಗದ ಸಹಾಯಕ ವಿರೇಂದ್ರ ಮಾದರ ಪಹಣಿ ಪತ್ರಿಕೆ ತಿದ್ದುಪಡಿ ಮಾಡಲು ಪ್ರಲ್ಹಾದ ಕೃಷ್ಣಾಜೀ ಮುತಾಲಿಕದೇಸಾಯಿ ಅವರಿಂದ 15ಸಾವಿರ ಹಣ ಪಡೆಯುವ ಸಂದರ್ಭದಲ್ಲಿ ಎಸಿಬಿಯ ಇನ್ಸಪೆಕ್ಟರ್‍ಗಳಾದ ವಿಶ್ವನಾಥ ಹಾಗೂ ಧರನಾಯ್ಕ ಅವರ ನೇತೃತ್ವದ ತಂಡ ದಾಳಿ ನಡೆಸಿತು.