Latest

ಎಸ್‌ಸಿಪಿ-ಟಿಎಸ್‌ಪಿ ಅನುದಾನ ಬಳಕೆ ಮಾಡಿ: ಡಾ.ಜಿ. ಪರಮೇಶ್ವರ

   ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಸಮಾಜ‌ಕಲ್ಯಾಣ‌ ಇಲಾಖೆಯಿಂದ‌ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ನೀಡಿರುವ ಅನುದಾನವನ್ನು ನಗರದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮನೆ ನಿರ್ಮಾಣ, ರಸ್ತೆ, ನೀರು, ಶಿಕ್ಷಣಕ್ಕೆ ಬಳಕೆ‌ ಮಾಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದರು.
ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಎಸ್‌ಸಿಪಿ‌-ಟಿಎಸ್‌ಪಿ ಅಡಿಯಲ್ಲಿ ಎಸ್‌ಸಿ, ಎಸ್‌ಟಿ ಅವರಿಗಾಗಿ ಪ್ರತಿ ಇಲಾಖೆಗೂ ಅನುದಾನ ನೀಡಲಾಗುತ್ತಿದೆ.‌ ಈ ಹಣವನ್ನು ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣದಂಥ ಬೇರೆ ಕೆಲಸಕ್ಕೆ ಬಳಕೆ‌ ಮಾಡಿಕೊಳ್ಳಬೇಡಿ. ಎಸ್‌ಸಿ, ಎಸ್‌ಟಿ ಅವರು ವಾಸವಿರುವ ಕಾಲೋನಿಗಳನ್ನು‌ ಗುರುತಿಸಿ, ಆ ಭಾಗದಲ್ಲಿ ಅವರಿಗೆ ನಿವಾಸ, ಕುಡಿಯುವ ನೀರು, ಶಿಕ್ಷಣ ಇತರೆ ಮೂಲಸೌಕರ್ಯ‌ ಒದಗಿಸುವ ನಿಟ್ಟಿನಲ್ಲಿ ಹಣ ಬಳಕೆ ಮಾಡಿಕೊಳ್ಳಿ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button