Latest

ಎಸ್.ಎಂ. ಕೃಷ್ಣ ಕಾಂಗ್ರೆಸ್ ಗೆ ಮರಳುತ್ತಾರೆನ್ನುವ ವದಂತಿಗೆ ಮತ್ತೆ ಜೀವ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಹಿರಿಯ ರಾಜಕೀಯ ಧುರೀಣ, ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಕಾಂಗ್ರೆಸ್ ಗೆ ಮರಳುತ್ತಾರೆನ್ನುವ ಹಲವು ದಿನಗಳ ವದಂತಿಗೆ ಮಂಗಳವಾರ ಮತ್ತೆ ರೆಕ್ಕ ಪುಕ್ಕ ಮೂಡಿದೆ.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೊಸ ವರ್ಷಕ್ಕೆ ಶುಭಾಷಯ ಕೋರುವ ನೆಪದಲ್ಲಿ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿದ್ದೇ ಇದಕ್ಕೆ ಕಾರಣ.
ರಾಜ್ಯದಲ್ಲಿ ತೀವ್ರ ರಾಜಕೀಯ ಬದಲಾವಣೆಯ ಸುದ್ದಿ ಬರುತ್ತಿರುವ ಬೆನ್ನಲ್ಲೇ ಈಗ ಈ ಹೊಸ ಸುದ್ದಿಯೂ ಹರಡುತ್ತಿದೆ. ಈ ಹಿಂದೆ ಕಾಂಗ್ರೆಸ್ ನಲ್ಲಿ ಮೂಲೆ ಗುಂಪಾದ ಹಿನ್ನೆಲೆಯಲ್ಲಿ ಕೃಷ್ಣ ಬಿಜೆಪಿ ಸೇರಿದ್ದರು. ಆದರೆ ಬಿಜೆಪಿಯಲ್ಲೂ ಅವರಿಗೆ ಯಾವುದೇ ಆದ್ಯತೆ ಸಿಗದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಗೆ ಮರಳಲಿದ್ದಾರೆ ಎನ್ನುವ ಸುದ್ದಿ 6-7 ತಿಂಗಳಿನಿಂದ ಕೇಳಿಬರುತ್ತಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಈಗ ತೀವ್ರ ಆತಂಕ ಎದುರಿಸುತ್ತಿರುವ ಸಂದರ್ಭದಲ್ಲಿ, ದಿನಕ್ಕೊಂದು ಹೊಸ ಸುದ್ದಿ ಕೇಳಿಬರುತ್ತಿರುವ ಮಧ್ಯೆಯೇ ಮಂಗಳವಾರ ಡಿಕೆಶಿ ಕೃಷ್ಣ ಅವರನ್ನು ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ.

Related Articles

Back to top button