ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ರಾಜ್ಯದ ಹಲವು ಐಎಫ್ಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.
ಅಂಬಾಡಿ ಮಾಧವ ಅವರನ್ನು ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನಾಗಿ, ವೆಂಕಟೇಶ್ ಬಿ ಅವರನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಕೆಆರ್ಐಡಿಎಲ್ ಬೆಂಗಳೂರು, ಪಾಲಯ್ಯ ಓ ಅವರನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಕಿಯೋನಿಕ್ಸ್ ಬೆಂಗಳೂರು, ಡಾ.ಸುನೀಲ ಪನವಾರ್ ಅವರನ್ನು ಬೆಂಗಳೂರಿನ ಎಂಎಸ್ ಬಿಲ್ಡಿಂಗ್ ನ ಎಲೆಕ್ಟ್ರಾನಿಕ್ಸ್ ಡಿಲೆವರಿ ಆಫ್ ಸಿಟಿಜನ್ ಸರ್ವೀಸ್ ನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಡೈರೆಕ್ಟರ್ ಆಗಿ, ಡಾ.ಕೆ.ಟಿ.ಹನುಮಂತಪ್ಪ ಅವರನ್ನು ಧಾರವಾಡದ ಸಂಶೋಧನಾ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆಗೊಳಿಸಿ ಅಧೀನ ಕಾರ್ಯದರ್ಶಿ ಎಸ್.ಕೆ.ನಾಗವೇಣಿ ಆದೇಶ ಹೊರಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ