ಪ್ರಗತಿವಾಹಿನಿ ಸುದ್ದಿ, ಹಳಿಯಾಳ
ಬಟ್ಟೆ ತೊಳೆಯಲು ಹೋಗಿ ಆಕಸ್ಮಿಕವಾಗಿ ಬಿದ್ದು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬೊಮ್ನಳ್ಳಿ ಗ್ರಾಮದ ಕಾಳಿನದಿಯಲ್ಲಿ ನಡೆದಿದೆ.
ಸಂಜೆ ವೇಳೆ ಕಾಳಿ ನದಿ ಬಳಿ ಬಟ್ಟೆ ಒಗೆಯಲು ಕುಟುಂಬ ತೆರಳಿತ್ತು.
ಈ ವೇಳೆ ಮಕ್ಕಳು ನದಿ ನೀರಿನಲ್ಲಿ ಆಟವಾಡುವಾಗ ಕೊಚ್ಚಿಕೊಂಡು ಹೋಗಿದ್ದು ಮಕ್ಕಳ ರಕ್ಷಣೆಗಾಗಿ ತಂದೆ ತಾಯಿ ಇಬ್ಬರೂ ನದಿಯಲ್ಲಿ ದುಮುಕಿದರು. ತಾಯಿ ಯನ್ನು ಮಾತ್ರ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಧೂಳು ಗಾವಡೆ(೪೮), ಕೃಷ್ಣಾ ಧೂಳು ಗಾವಡೆ(೬), ಗಾಯತ್ರಿ ಧೂಳು ಗಾವಡೆ(೯) ಹಾಗೂ ಸತೀಶ್ ಬೀರು ಗಾವಡೆ(೭) ಮೃತ ದುರ್ದೈವಿಗಳಾಗಿದ್ದು ನೀರಿನಲ್ಲಿ ಮುಳುಗಿದ್ದ ರಾಮಿ ಬಾಯಿ ಎಂಬುವವಳನ್ನು ರಕ್ಷಣೆಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಕೊಂಡೊಯ್ಯಲಾಗಿದೆ. ಮುಳುಗಡೆಯಾಗಿದ್ದ ಗಾಯತ್ರಿ ಧೂಳು ಗಾವಡೆ (9) ಶವ ಪತ್ತೆ ಯಾಗಿದ್ದು ನದಿಯಿಂದ ಮೇಲೆತ್ತಲಾಗಿದೆ.ಘಟನೆ ಸಂಬಂಧ ಅಂಬಿಕಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ