Belagavi NewsBelgaum NewsKannada NewsKarnataka NewsNationalPolitics

*ಕುಡಿಯುವ ನೀರಿನ ಘಟಕ ದುರಸ್ಥಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಳಗಾವಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳನ್ನು ದುರಸ್ಥಿ ಮಾಡುವ ಕುರಿತು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು. 

ಬೆಳಗಾವಿಯಲ್ಲಿ ಕಳೆದ ಒಂದು ತಿಂಗಳಿನಿಂದ ಅತಿಯಾಗಿ ಮಳೆ ಬಿದ್ದ ಕಾರಣ ಹಿಡಕಲ್ ಜಲಾಶಯ, ರಾಕಸಕೊಪ್ಪ ಜಲಾಶಯ ಹಾಗೂ ಮಾರ್ಕಂಡೇಯ ನದಿಗಳು ತುಂಬಿ ಹರಿಯುತ್ತಿದ್ದು, ಇದರ ವ್ಯಾಪ್ತಿಯಲ್ಲಿ ಬರುವ ನೀರಿನ ಶುದ್ದೀಕರಣ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಅಧಿಕಾರಿಗಳು ಅದರ ಕಡೆ ಸರಿಯಾಗಿ ಗಮನ ಹರಿಸದೇ ಇರುವುದರಿಂದ ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮನೆಗಳಿಗೆ ಸರಬುರಾಜು ಮಾಡುವ ಕುಡಿಯುವ ನೀರು ಸಂಪೂರ್ಣವಾಗಿ ಶುದ್ದೀಕರಣವಾಗದೇ ಕಲುಷಿತ ನೀರು ಪೂರೈಕೆಯಾಗುತ್ತಿರುತ್ತದೆ. ಇದರಿಂದ ಸಾರ್ವಜನಿಕರು ಹಾಗೂ ಮಕ್ಕಳು ಕಲುಷಿತ ನೀರಿನ ಸೇವನೆಯಿಂದ ಅಸ್ವಸ್ಥರಾಗಿ ಕಾಮಾಲೆ ಹಾಗೂ ಇನ್ನಿತರೆ ರೋಗಗಳಿಂದ ಬಳಲುತ್ತಿದ್ದಾರೆ.

ಕಾರಣ ಈ ಕುರಿತು ಸಂಬಂಧಪಟ್ಟಟ್ಟಂತಹ ಬೆಳಗಾವಿ ನಗರದ ಎಲ್‌&ಟಿ ಹಾಗೂ ಗ್ರಾಮೀಣ ಭಾಗದ ಗ್ರಾಮೀಣ ನೀರು ಸರಬುರಾಜು ಯೋಜನೆ ಬೆಳಗಾವಿ ಅಧಿಕಾರಿಗಳು, ಮಹಾಪೌರರು, ಉಪ ಮಹಾಪೌರರು, ನಗರ ಸೇವಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ವೈಧ್ಯರ ಜೊತೆ ಸಭೆ ಕರೆದು ಶುದ್ದ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಜರುಗಿಸುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ಅಧ್ಯಕ್ಷರು ಮಾಜಿ ನಗರ ಸೇವಕ ಅಸೋಸಿಯೇಷನ್ ಬೆಳಗಾವಿ ಹಾಗೂ ಮಾಜಿ ಮಹಾಪೌರರಾದ ಶಿವಾಜಿರಾವ ಸುಂಟಕರ, ಮಾಜಿ ಮಹಾಪೌರರಾದ ನಾಗೇಶ ಸಾತೇರಿ, ಮಾಜಿ ನಗರ ಸೇವಕರಾದ ಸಂಜಯ ಪ್ರಭು, ಮಾಜಿ ಎಪಿಎಮ್‌ ಸಿ ಅಧ್ಯಕ್ಷರಾದ ಅಪ್ಪಾ ಜಾಧವ ವಕೀಲರಾದ ಅಪ್ಪಾ ಜಾಧವ, ಹಾಗೂ ಪುಂಡಲೀಕ ಪಾವಶೆ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button