
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಉತ್ತರಾಖಂಡದ ಗಡಿ ಉತ್ತರಕಾಶಿಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಕರ್ನಾಟಕ ಮೂಲದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಕಾಶಿಯಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಬೆಂಗಳೂರು ಮೂಲದ ಇಬ್ಬರು ಸಾವನ್ನಪ್ಪಿದ್ದಾರೆ. ವಿಕ್ರಮ್ ಎಂ ಹಾಗೂ ರಕ್ಷಿತ್ ಕೆ ಮೃತರು. ಕಾರ್ಯಾಚರಣೆ ವೇಳೆ ಇಬ್ಬರ ಮೃತದೇಹ ಪತ್ತೆಯಾಗಿದೆ.
ಕಳೆದವಾರ ಉತ್ತರಾಖಂಡದಲ್ಲಿ ಸಂಭವಿಸಿದ ಹಿಮಪಾತದ ವೇಳೆ ಈ ಇಬ್ಬರು ನಾಪತ್ತೆಯಾಗಿದ್ದರು. ಆದರೆ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಬೆಂಗಳೂರು ಮೂಲದ ಇಬ್ಬರು ಯುವಕರ ಸಾವಿನ ಬಗ್ಗೆ ನೆಹರು ಇನ್ಸ್ ಸ್ಟಿಟ್ಯೂಟ್ ಖಚಿತ ಪಡಿಸಿದೆ.
ಉತ್ತರಾಖಂಡದ ಉತ್ತರಕಾಶಿ ಭಾಗದ ದೊರೌಪದಿಯ ದಂದ-2 ಪ್ರದೇಶಕ್ಕೆ ನೆಹರೂ ಪರ್ವತಾರೋಹಣ ಸಂಸ್ಥೆಯ 40 ಜನರ ತಂದ ಪರ್ವತಾರೋಹಣಕ್ಕೆ ತೆರಳಿತ್ತು. ಈ ವೇಳೆ ಹಿಮಪಾತವುಂಟಾಗಿದ್ದು, ಹಿಮಪಾತದಲ್ಲಿ 29 ಜನರು ಸಾವನ್ನಪ್ಪಿದ್ದಾರೆ. ವಿಪತ್ತು ನಿರ್ವಹಣಾ ತಂಡದಿಂದ ಕಾರ್ಯಾಚರಣೆ ಮುಂದುವರೆದಿದೆ.
ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ; CPI ಅಮಾನತು
https://pragati.taskdun.com/latest/bagalakote-cpikareppa-bannisuspended/




