Latest

ಕುಟುಂಬದವರೊಂದಿಗೆ ಮುಖ್ಯಮಂತ್ರಿ ಜನ್ಮದಿನ

*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ತಮ್ಮ ಜನ್ಮದಿನವಾದ ಡಿಸೆಂಬರ್ 16 ರಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕುಟುಂಬದವರೊಂದಿಗೆ ಸಮಯ ಕಳೆಯಲಿದ್ದಾರೆ.
ಜೆ.ಪಿ. ನಗರದ ತಮ್ಮ ನಿವಾಸದಲ್ಲಿ ಅವರು ಲಭ್ಯರಿರುವುದಿಲ್ಲ. ಹಿತೈಷಿಗಳು, ಅಭಿಮಾನಿಗಳು ಬೆಳಗಾವಿ ಅಧಿವೇಶನದ ನಂತರ ಅವರನ್ನು ಭೇಟಿ. ಮಾಡಬಹುದಾಗಿದೆ.
ತಮ್ಮ ಜನ್ಮದಿನದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಫ್ಲೆಕ್ಸ್, ಬ್ಯಾನರ್ ಅಳವಡಿಸದಿರುವಂತೆ ಅವರು ಮನವಿ ಮಾಡಿದ್ದು, ‘ನಿಮ್ಮ ಶುಭ ಹಾರೈಕೆಗಳೇ ನನಗೆ ಶ್ರೀರಕ್ಷೆ. ಫ್ಲೆಕ್ಸ್ ಬ್ಯಾನರ್ ಅಳವಡಿಸಿ ಊರಿನ ಅಂದ ಹಾಳು ಮಾಡಬೇಡಿ. ಪರಿಸರ ಕಾಳಜಿ ಮೆರೆದಲ್ಲಿ ಅದೇ ಅತ್ಯುತ್ತಮ ಸಂದೇಶ’ ಎಂದು ಅವರು ವಿನಂತಿಸಿದ್ದಾರೆ.
ಸೋಮವಾರ, ಡಿಸೆಂಬರ್ 17ರಂದು ಅವರು ಭೋಪಾಲ್ ನಲ್ಲಿ ಮಧ್ಯಪ್ರದೇಶ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button