ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ತಿಲ್ಹಾರಿ ಡ್ಯಾಂಮ್ ಹತ್ತಿರ ಎಸೆದಿದ್ದ ವ್ಯಕ್ತಿಯನ್ನು 9 ತಿಂಗಳ ನಂತರ ಬಂಧಿಸುವಲ್ಲಿ ಟಿಳಕವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಮಾರು 9 ತಿಂಗಳ ಹಿಂದೆ ತನ್ನ ಹೆಂಡತಿಯೊಡನೆ ಅನೈತಿಕ ಸಂಬಂಧ ಹೊಂದಿದ್ದ ವಡಗಾವಿ ಅನ್ನಪೂರ್ಣೇಶ್ವರಿ ನಗರದ ರಾಹುಲ ಶರಣಪ್ಪಾ ದಿವಟಗಿ ( ೨೭) ಎಂಬಾತನನ್ನು ಸಂಚು ರೂಪಿಸಿ 4 ಜನ ಸೇರಿ ಕೊಲೆ ಮಾಡಿ ಚೀಲದಲ್ಲಿ ಹಾಕಿ, ಕಾರಿನಲ್ಲಿ ತಿಲಾರಿ ಡ್ಯಾಮಿನ ಹತ್ತಿರ ಜಂಗಲ್ ನಲ್ಲಿ ಶವ ಎಸೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿತರನ್ನು ಬಂಧಿಸಲಾಗಿತ್ತು. ಆದರೆ ಫರಾರಿಯಾಗಿದ್ದ ಮುಖ್ಯ ಆರೋಪಿ ಸವದತ್ತಿ ತಾಲೂಕಿನ ಹೊಸೂರಿನ ಮಲ್ಲಿಕಾರ್ಜುನ ಮಹಾದೇವಪ್ಪ ಗುಡಶೆಟ್ಟಿ (೩೫ ) ಎನ್ನುವವನನ್ನು ಬಂಧಿಸಲು ಜಾಲ ಬೀಸಲಾಗಿತ್ತು.
ಅಪರಾಧ ವಿಭಾಗದ ಎಸಿಪಿ ಮಾಹಾಂತೇಶ್ವರ ಜಿದ್ದಿ, ಖಡೇಬಜಾರ ಎಸಿಪಿ ಎ. ಚಂದ್ರಪ್ಪ ಉಸ್ತುವಾರಿಯಲ್ಲಿ ಟಿಳಕವಾಡಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮತ್ತು ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಬಂಧಿಸುವಲ್ಲಿ ಸತತ ಶ್ರಮಿಸಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾದ ಟಿಳಕವಾಡಿ ಪಿಐ ಎಸ್, ಆರ್. ನಾಯ್ಕ ಮತ್ತು ತಂಡದ ಎಎಸ್‌ಐ ಎಮ್. ವೈ. ಕಾರಿಮನಿ ವಿ. ಡಿ. ಸರನಾಯಕ, ಆರ್. ಎಮ್. ಪರಮಾಜ, ಲಕ್ಷ್ಮಣ ಗೂಗಾಡೆ, ಆರ್. ಜೆ. ಕೋಳಿ, ಎಮ್. ಜಿ. ಮರನಿಂಗಗೋಳ ಇವರ ಕಾರ್ಯವನ್ನು ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳಿಬ್ಬರೂ ಪ್ರಶಂಸಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ