LatestPolitics

ಕ್ಯಾಂಪಸ್ ಸಂದರ್ಶನದಲ್ಲಿ 116 ವಿದ್ಯಾರ್ಥಿಗಳ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:
ಚಿಕ್ಕೋಡಿ ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜಿನ ಅಂತೀಮ ವರ್ಷದ ೧೧೬ ವಿದ್ಯಾರ್ಥಿಗಳು ೨೦೧೮-೧೯ನೇಯ ಶೈಕ್ಷಣಿಕ ವರ್ಷದಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ  ತಿಳಿಸಿದ್ದಾರೆ.
ಉದ್ಯೋಗಾವಕಾಶ ಮತ್ತು ತರಬೇತಿ ಘಟಕದ ಆಶ್ರಯದಲ್ಲಿ ಪ್ರಥಮ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ದೇಶದ ವಿವಿಧ ಕಂಪನಿಗಳ ತಜ್ಞರಿಂದ ಕಾರ್ಯಾಗಾರ ಹಾಗೂ ತರಬೇತಿಯನ್ನು ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿಗಳ ಸಂವಹನ ಮತ್ತು ಸಂದರ್ಶನ ಕಲೆಯನ್ನು ಕರಗತಗೋಳಿಸಲು ಲ್ಯಾಂಗ್ವೇಜ್ ಲ್ಯಾಬ್ ಹಾಗೂ ಆಕ್ಟಿವಿಟಿ ರೂಮ್ ಸ್ಥಾಪಿಸಲಾಗಿದೆ. ಬೆಂಗಳೂರಿನ ರ‍್ಯಾರೋ, ಫೋಕಸ್ ಅಕ್ಯಾಡೆಮಿ, ಡೇರ್ ಟೂ ಡ್ರೀಮ್, ಓರ‍್ಯಾಕಲ್ ಯುನಿವರ್ಸಿಟಿ, ಓಲೀವ್ ಬೋರ್ಡ ತರಬೇತಿ ಸಂಸ್ಥೆಗಳು ಹಾಗೂ ಹಲವಾರು ತಜ್ಞರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ತರಬೇತಿಯನ್ನು ನೀಡುತಿದ್ದಾರೆ. ಇದರ ಫಲವಾಗಿ ೨೦೧೮-೧೯ನೇಯ ಶೈಕ್ಷಣಿಕ ವರ್ಷದಲ್ಲಿ ೧೧೬ ವಿದ್ಯಾರ್ಥಿಗಳು ಕ್ಯಾಂಪಸ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಈ ವಿದ್ಯಾರ್ಥಿಗಳಿಗೆ ಕೆ.ಎಲ್.ಇ ಸಂಸ್ಥೆಯ ಚೇರಮನ್ನರಾದ ಡಾ. ಪ್ರಭಾಕರ ಕೋರೆ, ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button