Latest

*ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ. ವಿಶ್ವವಿದ್ಯಾಲಯಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ವಶ ಪಡಿಸಿಕೊಂಡಿದ್ದಾರೆ ಎಂದು ಉದ್ಯಮಿ ಮಲ್ಲಿಕ್ ರಿಯಾಜ್ ಆರೋಪಿಸಿದ್ದರು. ಅಲ್ಲದೇ ರಿಯಾಜ್ ಹಾಗೂ ಅವರ ಪುತ್ರಿಯ ಆಡಿಯೋ ವೈರಲ್ ಆಗಿತ್ತು. ಇಮ್ರಾನ್ ಪತ್ನಿ ಬುಶ್ರಾ ಬಿಬಿ ತನಕೆ ಐದು ಕ್ಯಾರೆಟ್ ವಜ್ರದ ಉಂಗುರ ಬೇಕೆಂದು ಬೇಡಿಕೆ ಇಟ್ಟಿದ್ದಾಗಿ ರಿಯಾಜ್ ಪುತ್ರಿ ಹೇಳಿದ್ದರು. ಪ್ರಕರಣ ಸಂಬಂಧ ಇಮ್ರಾನ್ ಖಾನ್ ಬಂಧನವಾಗಿದೆ.

ಇಮ್ರಾನ್ ಖಾನ್ ಬಂಧನ ಬೆನ್ನಲ್ಲೇ ಇಸ್ಲಾಮಾಬಾದ್ ನಲ್ಲಿ ಮಾರಾಮಾರಿ ನಡೆದಿದೆ. ಇಸ್ಲಾಮಾಬಾದ್ ಹೈಕೋರ್ಟ್ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

https://pragati.taskdun.com/vidhanasabha-electionbelagavielection-commission/

Home add -Advt

Related Articles

Back to top button