Latest

ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಕಾರು ಅಪಘಾತ; ತಲೆಗೆ ಗಾಯ

ಪ್ರಗತಿವಾಹಿನಿ ಸುದ್ದಿ, ಸೊಲ್ಲಾಪುರ (ಮಹಾರಾಷ್ಟ್ರ)
ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ್ ಕಾರು ಅಪಘಾತಕ್ಕೀಡಾಗಿದ್ದು, ಅವರ ತಲೆಗೆ ಗಾಯಗಳಾಗಿದ್ದು, ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೋಕಸಭಾ ಚುನಾವಣೆ ಪ್ರಚಾರಕ್ಕೆಂದು ಖಾನಾಪುರದಿಂದ ನಾಂದೇಡಕ್ಕೆ ತೆರಳುತ್ತಿದ್ದಾಗ ಸೊಲ್ಲಾಪುರದ ರಾಜಸಾಬ್ ಫಾರ್ಮ ಹೌಸ್ ಬಳಿ ಅವರ ಕಾರಿಗೆ ಎದುರಿನಿಂದ ಬರುತ್ತಿದ್ದ ವಾಹನ ಡಿಕ್ಕಿ ಹೊಡೆದಿದೆ. ಇವರ ಕಾರಲ್ಲದೆ ಇನ್ನು ಹಲವು ಕಾರುಗಳಿಗೆ ಸಹ ಡಿಕ್ಕಿಯಾಗಿದೆ.
ಅಂಜಲಿ ಕುಳಿತಿದ್ದ ಕಾರು 2 ಬಾರಿ ಉರುಳಿ ಹೊಂಡಕ್ಕೆ ಬಿದ್ದಿದೆ. ಈ ವೇಳೆ ಏರ್ ಬ್ಯಾಗ್ ತೆರೆದಿದ್ದರಿಂದ ಬಹುದೊಡ್ಡ ಅಪಾಯ ತಪ್ಪಿದೆ. ಅಂಜಲಿ ಅವರಿಗೆ ತಲೆಯ ಬಲಭಾಗಕ್ಕೆ ಪೆಟ್ಟು ಬಿದ್ದಿದೆ. ಸಧ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಸೂಕ್ಷ್ಮನಿಗಾವಹಿಸಲಾಗುತ್ತಿದೆ.
ಚಾಲಕ ಮಹಾದೇವ ಮತ್ತು ಗನ್ ಮ್ಯಾನ್ ಸಯ್ಯದ ಕೂಡ ಗಾಯಗೊಂಡಿದ್ದಾರೆ. ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Back to top button