Latest

ಗಡಿ, ನಾಡು, ನುಡಿಯ ಬಗ್ಗೆ ಅಭಿಮಾನ ಹೊಂದಿದ್ದ ಸನದಿ: ಗವಿಮಠ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಗಡಿಭಾಗದ ಬಗ್ಗೆ, ನಾಡು ನುಡಿಯ ಬಗ್ಗೆ ಬಿ.ಎ.ಸನದಿ ಅಪಾರ ಅಭಿಮಾನ ಹೊಂದಿದ್ದರು. ಅವರಂಥ ಮಾನವೀಯ ಪೀಳಿಗೆ ಇಲ್ಲಿ ಬೆಳೆಯಬೇಕಾಗಿದೆ ಎಂದು ಹಿರಿಯ ಸಾಹಿತಿ ಬಿ.ಎಸ್.ಗವಿಮಠ ಹೇಳಿದರು.
ಅವರು ಇಂದು ಮುಂಜಾನೆ ಕನ್ನಡ ಶಾಹಿತ್ಯ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತ,   ಸನದಿಯವರು ದೂರದ ಕುಮಟಾದಲ್ಲಿದ್ದರೂ ಬೆಳಗಾವಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು , ಮಿತ್ರರನ್ನು ಹೊಂದಿದ್ದರು ಎಂದು ಸ್ಮರಿಸಿಕೊಂಡರು.
           ಈ ಸಂದರ್ಭದಲ್ಲಿ ಬಸವರಾಜ ಜಗಜಂಪಿ, ಅಶೋಕ ಚಂದರಗಿ, ಎಮ್.ಎಸ್.ಇಂಚಲ, ನೀಲಗಂಗಾ ಚರಂತಿಮಠ , ಭೀಮಸೇನ ತೊರಗಲ್ಲ ಮುಂತಾದವರು ಮಾತನಾಡಿದರು.

Related Articles

Back to top button