Latest

ಗೊಂದಲಕ್ಕಿಂತ ಸರಕಾರ ಉರುಳಿಸುವುದೇ ಒಳಿತು -ಹೊರಟ್ಟಿ

    ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ

ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ನಡೆಯುತ್ತಿರುವ ಗೊಂದಲ ನೋಡಿದರೆ ಸರಕಾರವನ್ನು ಉರುಳಿಸುವುದೇ ಒಳ್ಳೆಯದು ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹದ್ದು ಮೀರಿ ವರ್ತಿಸುತ್ತಿದೆ. ಅನೇಕ ಶಾಸಕರು ನಮ್ಮ ಸಿಎಂ ಸಿದ್ದರಾಮಯ್ಯ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ಮೈತ್ರಿ ಧರ್ಮ ಪಾಲಿಸದೆ ಗಡಿ ಮೀರುತ್ತಿದೆ. ಇದು ಹೀಗೆಯೇ ಮುಂದುವರೆದರೆ ಕಷ್ಟವಾಗುತ್ತದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಇದೇ ರೀತಿ ಮುಂದುವರೆದರೆ ಬಜೆಟ್ ಮಂಡನೆ ಕಷ್ಟವಾಗುತ್ತದೆ. ಪದೇ ಪದೆ ಹೀಗೆ ಗೊಂದಲಗಳ ನಡುವೆ ಸರ್ಕಾರ ನಡೆಸುವುದಕ್ಕಿಂತಲೂ ಸರ್ಕಾರವನ್ನು ಉರುಳಿಸುವುದೇ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ತಕ್ಷಣ ತನ್ನ ಶಾಸಕರನ್ನು ನಿಯಂತ್ರಿಸಬೇಕು. ಕುಮಾರಸ್ವಾಮಿ ನೆಮ್ಮದಿಯಿಂದ ಕೆಲಸ ಮಾಡಲು ಅವಕಾಶ ಕೊಡಬೇಕು. ಇಲ್ಲವಾದಲ್ಲಿ ಸಿದ್ದರಾಮಯ್ಯ ಅವರ ಮೇಲೆಯೇ ಅನುಮಾನ ಬರುತ್ತದೆ. ಅವರಿಗೆ ಸರಕಾರ ಬೇಕಿಲ್ಲದಿದ್ದರೆ ಅವರ ದಾರಿ ಅವರು ನೋಡಿಕೊಳ್ಳಲಿ ಎಂದು ಹೊರಟ್ಟಿ ಹೇಳಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button