Kannada NewsKarnataka NewsLatestPolitics

*25 ಶಾಸಕರು ವಿದೇಶ ಪ್ರವಾಸ: ಫಾರಿನ್ ಟ್ರಿಪ್ ಬಗ್ಗೆ ಬಿಗ್ ಅಪ್ ಡೇಟ್ ಜೊತೆಗೆ ಸ್ಪಷ್ಟ ಮಾಹಿತಿ ನೀಡಿದ ಶಾಸಕ ಪುಟ್ಟರಂಗಶೆಟ್ಟಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ನಡುವೆಯೇ ಶಾಸಕರು ವಿದೇಶ ಪ್ರವಾಸಕ್ಕೆ ಸಿದ್ಧತೆ ನಡೆಸಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಕಾಂಗ್ರೆಸ್ ನ 35 ಶಾಸಕರು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಬಣದ ಶಾಸಕರು ಫಾರಿನ್ ಟ್ರಿಪ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶಾಸಕ ಪುಟ್ಟರಂಗ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ನ 25 ಶಾಸಕರು ವಿದೇಶ ಪ್ರವಾಸ ಮಾಡುತ್ತಿದ್ದೇವೆ. ಅದು ಪಶುಸಂಗೋಪನಾ ಇಲಾಖೆಯಿಂದ ಆಯೋಜಿಸಿರುವ ಪ್ರವಾಸ. ಆಸ್ಟ್ರ‍ೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಗಳಲ್ಲಿ ಪಶುಸಂಗೋಪನೆ ಹಾಗೂ ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಅಭಿವೃದ್ಧಿಗಳು ನಡೆದಿವೆ. ಅವುಗಳ ಬಗ್ಗೆ ಅಧ್ಯಯನ ಮಾಡಲು ಹಾಗೂ ಅಲ್ಲಿನ ಅಭಿವೃದ್ಧಿ ತಂತ್ರಜ್ಞಾನಗಳನ್ನು ನಮ್ಮಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಚರ್ಚಿಸುವ ನಿಟ್ಟಿನಲ್ಲಿ ಇದೊಂದು ಅಧ್ಯಯನ ಪ್ರವಾಸ ಎಂದು ತಿಳಿಸಿದ್ದಾರೆ.

ನಾವು ಯಾರ ಬಣದಿಂದ ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ. ನಾವೆಲ್ಲರೂ ಕಾಂಗ್ರೆಸ್ ಬಣ ಅಷ್ಟೇ. ಮೊದಲು 35 ಜನರು ಹೋಗುವುದು ಎಂದಾಗಿತ್ತು. ಈಗ 25 ಶಾಸಕರು ಹೋಗುತ್ತಿದ್ದೇವೆ. ಈ ಪ್ರವಾಸಕ್ಕೆ ರಾಜಕೀಯ ಬಣ್ಣ ಬಳಿಯುವುದು ಬೇಡ. ಇದು ಪಶುಸಂಗೋಪನಾ ಇಲಾಖೆ ನಡೆಸುತ್ತಿರುವ ಪ್ರವಾಸ. ರಾಜಕೀಯ ಚರ್ಚೆಗಾಗಿ ನಾವು ವಿದೇಶಕ್ಕೆ ಹೋಗುತ್ತಿಲ್ಲ. ಕುಟುಂಬ ಸಮೇತ ಹೋಗುತ್ತಿದ್ದೇವೆ. ಅಧ್ಯಯನದ ನಿಟ್ಟಿನಲ್ಲಿ ಹೋಗುತ್ತಿರುವುದು. ಅಲ್ಲಿ ಯಾವುದೇ ಅಧಿಕಾರ ಹಂಚಿಕೆ ಚರ್ಚೆಯೂ ಆಗುವುದಿಲ್ಲ. ಅಧಿಕಾರ ಹಂಚಿಕೆ ಬಗ್ಗೆ ನಿರ್ಧರಿಸುವುದು ಕಾಂಗ್ರೆಸ್ ಹೈಕಮಾಂಡ್. ಈ ಬಗ್ಗೆ ನಾವು ಯಾವ ಚರ್ಚೆ ಮಾಡಿದರೂ ನಮ್ಮ ಕೈಯಲ್ಲಿ ಏನೂ ಇಲ್ಲ. ಎಲ್ಲಾ ನಿರ್ಧಾರ ಹೈಕಮಾಂಡ್ ಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button