Latest

ಚಿಂತಾಮಣಿಯಲ್ಲೊಂದು ವಿಷ ಪ್ರಸಾದ ಪ್ರಕರಣ; ಮಹಿಳೆ ಸಾವು, ಹಲವರ ಸ್ಥಿತಿ ಗಂಭೀರ

   ಪ್ರಗತಿವಾಹಿನಿ ಸುದ್ದಿ, ಚಿಕ್ಕಬಳ್ಳಾಪುರ
ಚಿಂತಾಮಣಿ ನಗರದ ನಾರಸಿಂಹ ಪೇಟೆಯಲ್ಲಿರುವ ಗಂಗಮ್ಮ ದೇವಸ್ಥಾನದಲ್ಲಿ ಘಟನೆ ಪ್ರಸಾದ ಸೇವಿಸಿದ ಮಹಿಳೆ ಸಾವನ್ನಪ್ಪಿದ್ದಾಳೆ. ಪ್ರಸಾದ ಸೇವಿಸಿದ ಇನ್ನೂ 6 ಜನರ ಸ್ಥಿತಿ ಗಂಭೀರವಾಗಿದೆ.
ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಕವಿತಾ ಎನ್ನುವ ಮಹಿಳೆ ಸಾವಿಗೀಡಾಗಿದ್ದಾಳೆ.  ಸರಸ್ವತಮ್ಮ, ಗಂಗಾಧರ, ಗಾನವಿ, ಚರಣ್, ನಾರಾಯಣಮ್ಮ, ವೆಂಕಟರಮಣಪ್ಪ ಎನ್ನುವವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಸ್ವಸ್ಥರಿಗೆ ಚಿಂತಾಮಣಿ ಹಾಗೂ ಕೋಲಾರದ ಜಾಲಪ್ಪ, ಎಸ್ ಎನ್ ಆರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿಂತಾಮಣಿ ನಗರ ಪೊಲೀಸರು ಗಂಗಮ್ಮನ ದೇವಸ್ಥಾನದ ಟ್ರಸ್ಟಿ ಹಾಗೂ ಅರ್ಚಕರನ್ನು ವಶಕ್ಕೆ ಪಡೆಯು ವಿಚಾರಣೆ ನಡೆಸುತ್ತಿದ್ದಾರೆ. ಚಾಮರಾಜನಗರದ ಸುಳ್ವಾಡಿ ವಿಷ ಸೇವನೆ ಪ್ರಕರಣ ಮರೆಯುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದೆ. 
ಎಸ್ ಪಿ ಕಾರ್ತಿಕ್ ರೆಡ್ಡಿ ದೇವಸ್ಥಾನಕ್ಕೆ ಭೇಟಿ ನೀಡು ಪರಿಶೀಲನೆ ನಡೆಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿಯ ಸರಸ್ವತಮ್ಮ ಎನ್ನುವವರು ಮಗಳ ಮನೆಗೆ ಬಂದವರು ಸಹ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದಾರೆ.
ಕೋಲಾರದ ಆರ್​.ಎಲ್​ ಜಾಲಪ್ಪಾ ಆಸ್ಪತ್ರಗೆ  ಸಂಸದ ಕೆ.ಹೆಚ್.​ ಮುನಿಯಪ್ಪ, ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್​ ರೆಡ್ಡಿ, ಕೋಲಾರ ಎಸ್ಪಿ ರೋಹಿಣಿ ಕಠೋಚ್​ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button