
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:
ಸ್ಥಳೀಯ ಕೆಎಲ್ಇ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ’ನೃತ್ಯಂ’ ಡಾನ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿವಿಧ ಕಾಲೇಜುಗಳ ೨೦ ವಿದ್ಯಾರ್ಥಿ ತಂಡಗಳು ಪಾಲ್ಗೊಂಡಿದ್ದವು. ಸ್ಪರ್ಧೆಯಲ್ಲಿ ಹಳಿಯಾಳದ ವಿಡಿಆರ್ಐಟಿ ಕ್ಲಾಸ್ಸಿ ಕ್ಯಾಟ್ಸ್ ತಂಡ ಪ್ರಥಮ, ಎಚ್ಐಟಿ ನಿಡಸೋಶಿ ತಂಡ ದ್ವಿತೀಯ ಹಾಗೂ ಇಚಲಕರಂಜಿಯ ಡಿಕೆಟಿಇ ತಂಡ ತೃತೀಯ ಸ್ಥಾನ ಪಡೆದವು.

ರೇಖಾ ಭಟ್ ಮತ್ತು ನಂದಿನಿ ದೈವ ಸ್ಪರ್ಧೆಗಳ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಪ್ರೊ. ಸಂಕಲ್ಪ ಮೆಹತಾ ಸಂಯೋಜಿಸಿದರು. ಸಾನಿಯಾ ಖತೀಬ ಸ್ವಾಗತಿಸಿದರು. ನಮ್ರತಾ ಪಾಟನಕರ ಮತ್ತು ಶಾಹೀನ ಸಯ್ಯದ ಪರಿಚಯಿಸಿದರು. ಚೈತ್ರಾ ಪಾಟೀಲ, ನಾಗರಾಜ ಎಚ್.ಎ. ನಿರೂಪಿಸಿದರು. ಕಮರೀನ ವಂದಿಸಿದರು.