ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ತಾಲೂಕಿನ ಯಾದವಾಡ ಗ್ರಾಮದ ಶ್ರೀ ಚೌಕೇಶ್ವರ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಜರುಗಿದ ಎತ್ತುಗಳ ಕೂಡು ಗಾಡಿ ಸ್ಪರ್ಧೆ, ಜೋಡು ಕುದುರೆ ಬಂಡಿ ಸ್ಪರ್ಧೆ ಮತ್ತು ಒಂದು ಎತ್ತಿನ ಕಲ್ಲು ಜಗ್ಗಿಸುವ ಸ್ಪರ್ಧೆಗಳು ಜನಮನ ಸೆಳೆದವು.
ಎತ್ತುಗಳ ಕೂಡು ಗಾಡಿ ಸ್ಫರ್ಧೆಯಲ್ಲಿ ಶೇಡಬಾಳದ ಶಾಮರಾವ್ ನಾಯ್ಕ ಎತ್ತುಗಳು ಪ್ರಥಮ ಬಹುಮಾನ ೫೦ ಸಾವಿರ ರೂ, ಹೊನ್ನವಾಡ ರಮೇಶ ಪಾಟೀಲ ಎತ್ತುಗಳು ದ್ವಿತೀಯ ಬಹುಮಾನ ೪೦ ಸಾವಿರ ರೂ, ತೆಲಸಂಗದ ಶಾಬನ್ನಾ ಸನಗೌಡ್ರ ಎತ್ತುಗಳು ತೃತೀಯ ಬಹುಮಾನ ೩೦ ಸಾವಿರ ರೂ, ಅಡಿಬಟ್ಟಿಯ ನಿಂಗಪ್ಪ ಅಡಿಬಟ್ಟಿ ಅವರ ಎತ್ತುಗಳು ನಾಲ್ಕನೇ ಬಹುಮಾನ ೨೦ ಸಾವಿರ ರೂ, ರತ್ನಾಪೂರದ ಸಿದ್ರಾಮ ಹಿರೇಕುರುಬರ ಎತ್ತುಗಳು ಐದನೇ ಬಹುಮಾನ ೧೦ ರೂ ಪಡೆದುಕೊಂಡರು.
ಜೋಡು ಕುದುರೆ ಬಂಡಿ ಸ್ಪರ್ಧೆಯಲ್ಲಿ ತಾಸಗಾಂವದ ಪ್ರಮೋದ ತಾಸಗಾಂವ ಇವರ ಕುದುರೆಗಳು ಪ್ರಥಮ ಬಹುಮಾನ ೨೫ ಸಾವಿರ ರೂ, ಮುರಗೋಡ ರವಿ ಮಂಗಳೆ ಕುದುರೆಗಳು ದ್ವಿತೀಯ ಬಹುಮಾನ ೨೦ ಸಾವಿರ ರೂ, ಸಾಂಗ್ಲಿಯ ಆನಂದ ಬಂಡಗಾರ ಕುದುರೆಗಳು ತೃತೀಯ ಬಹುಮಾನ ೧೫ ಸಾವಿರ ರೂ, ಸುಟ್ಟಟ್ಟಿಯ ರಾಯಪ್ಪ ಖೋತ ಇವರ ಕುದುರೆಗಳು ನಾಲ್ಕನೇ ಬಹುಮಾನ ೧೦ ಸಾವಿರ ರೂ, ಕೊಣ್ಣುರದ ದತ್ತು ಕೊಣ್ಣುರ ಕುದುರೆಗಳು ಐದನೇ ಬಹುಮಾನ ೫ಸಾವಿರ ರೂ ಪಡೆದುಕೊಂಡರು.
ಒಂದು ಎತ್ತಿನ ಕಲ್ಲು ಜಗ್ಗಿಸುವ ಸ್ಪರ್ಧೆಯಲ್ಲಿ ಮಾಚಕನೂರದ ಯಲ್ಲಪ್ಪಗೌಡ ಪರಪನ್ನವರ ಎತ್ತು ೪ ಪೂಟ್ ೮ ಇಂಚ್ ಸಾಗಿ ಪ್ರಥಮ ಬಹುಮಾನ ೧೫ಸಾವಿರ ರೂ, ಮಲ್ಲಾಪೂರದ ನಿಂಗಣಗೌಡ ಪರಪ್ಪನ್ನವರ ಎತ್ತು ೪ ಪೂಟ್ ೪ ಇಂಚು ಸಾಗಿ ದ್ವಿತೀಯ ಬಹುಮಾನ ೧೦ಸಾವಿರ ರೂ, ವಂಟಗೋಡಿಯ ಲಕ್ಷ್ಮೀದೇವಿ ಪ್ರಸನ್ನ ಎತ್ತು ೨ಪೂಟ್ ೬ಇಂಚ್ ಸಾಗಿ ತೃತೀಯ ಬಹುಮಾನ ೮ ಸಾವಿರ ರೂ ಪಡೆದುಕೊಂಡವು.
ಸ್ಪರ್ಧೆಯಲ್ಲಿ ೨೦ ಕೂಡು ಗಾಡಿ, ೧೨ ಕುದುರೆ ಗಾಡಿ, ೧೧ ಕಲ್ಲು ಜಗ್ಗುವ ಎತ್ತುಗಳು ಭಾಗವಹಿಸಿದವು.
ಈ ಸಮಯದಲ್ಲಿ ಜಾತ್ರಾ ಕಮೀಟಿಯ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡರ, ಉಪಾಧ್ಯಕ್ಷ ರಮೇಶ ಸಾವಳಗಿ, ಕಾರ್ಯದರ್ಶಿಗಳಾದ ಹಣಮಂತ ಚಿಕ್ಕೇಗೌಡರ, ಗೋಲಪ್ಪ ಕಾಗವಾಡ ಮತ್ತು ಹನಮಂತ ಹ್ಯಾಗಾಡಿ, ಸುನೀಲ ನ್ಯಾಮಗೌಡರ, ಗಿರೀಶ ಚಿಪಲಕಟ್ಟಿ, ಮಲ್ಲಪ್ಪ ರಾಮದುರ್ಗ, ತಮ್ಮಣ್ಣಾ ಬಡಿಗೇರ, ಮಲ್ಲಪ್ಪ ಮಾಳೇದ, ವೆಂಕಟೇಶ ಕೇರಿ, ಶಿವು ಕಲ್ಲೋಳಿ, ಬಸವರಾಜ ಕೆಂಜೋಳ ಕೃಷ್ಣಾ ಕೇರಿ, ಶಂಕರ ಹುಗ್ಗಿ, ಗುರುನಾಥ ಕೇರಿ, ಶಿವು ಅಮರಾನಿ ಹಾಗೂ ಜಾತ್ರಾ ಕಮೀಟಿ ನಿರ್ದೇಶಕರು ಇದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ