Latest

ಟೋಸ್ಟಮಾಸ್ಟರ್ಸ್ ಕ್ಲಬ್ ಅಧಿಕಾರ ಗ್ರಹಣ

ನಾಯಕತ್ವಕ್ಕಾಗಿ ನಿರಂತರ ಕಲಿಕೆ ಅಗತ್ಯ –  ಸಮಾರಂಭದಲ್ಲಿ ಡಾ. ಕಮಲಾಕರ ಅಚರೇಕರ ಅಭಿಪ್ರಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
 ಕೆಎಲ್‌ಎಸ್ ಐಎಂಇಆರ್ ಟೋಸ್ಟ ಮಾಸ್ಟರ್‍ಸ್ ಕ್ಲಬ್ ಅಧಿಕಾರ ಗ್ರಹಣ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ಕ್ಲಬ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ. ಕಮಲಾಕರ ಅಚರೇಕರ ಮಾತನಾಡಿ, ಸಮರ್ಥ ನಾಯಕತ್ವಕ್ಕಾಗಿ ನಿರಂತರ ಕಲಿಕೆ ಅಗತ್ಯ. ಪ್ರತಿ ಸೋಮವಾರ ಸಂಜೆ ೫.೩೦ಕ್ಕೆ ಐಎಂಇಆರ್‌ನಲ್ಲಿ ನಡೆಯುವ ಕ್ಲಬ್‌ನ ಸಭೆಗಳಲ್ಲಿ ಭಾಗವಹಿಸುವ ಮೂಲಕ ಧನಾತ್ಮಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದು ಎಂದರು.
ಸಮಾರಂಭದಲ್ಲಿ ಬೆಂಗಳೂರಿನ ಆವಿ ಸೋಲಾರ್ ಪ್ರೈ.ಲಿ. ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಟೋಸ್ಟ್ ಮಾಸ್ಟರ್ ನಿತಿನ ಬಿ. ಮಾತನಾಡಿ, ಕ್ಲಬ್ ಸದಸ್ಯತ್ವದಿಂದ ತಾವು ಉದ್ಯಮದಲ್ಲಿ ಸಾಧನೆ ಮಾಡಲು ಸಹಕಾರಿಯಾದ ಬಗ್ಗೆ ಮಾಹಿತಿ ಹಂಚಿಕೊಂಡರು.
ರಾಜ್ ಬೆಳಗಾಂವಕರ ಮಾತನಾಡಿ ನಗರದ ಜನತೆ ಕ್ಲಬ್ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.
ಟೋಸ್ಟ್ ಮಾಸ್ಟರ್ಸ್ ಕ್ಲಬ್ ಪ್ರಾದೇಶಿಕ ನಿರ್ದೇಶಕ ಹುಬ್ಬಳ್ಳಿಯ ಮನೀಶ ಜೈನ್ ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಿದರು. ವಿಭಾಗೀಯ ನಿರ್ದೇಶಕ ಬೆಂಗಳೂರಿನ ಪ್ರಕಾಶ ತಾಮ್ಹಣಕರ ಕ್ಲಬ್ ಸನ್ನದು ಹಸ್ತಾಂತರಿಸಿ ಡಾ. ಕಮಲಾಕರ ಅಚರೇಕರ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಿದರು.
ಹುಬ್ಬಳ್ಳಿಯ ಪ್ರೀತಿ ಕೋಠಾರಿ ನಿರ್ವಹಿಸಿದರು. ಪ್ರಿಯಾ ಠಾಕೂರ ವಂದಿಸಿದರು.
ಏನಿದು ಟೋಸ್ಟ್‌ಮಾಸ್ಟರ್ಸ್ ಕ್ಲಬ್? : ಉದ್ಯಮದಲ್ಲಿ ಯಶಸ್ಸು ಸಾಧಿಸಲು ನೆರವಾಗಲು ಸಮರ್ಥ ನಾಯಕತ್ವ ಹಾಗೂ ಸಂವಹನ ಕಲೆಗಳನ್ನು ಬೆಳೆಸುವ ಉದ್ದೇಶದಿಂದ ಟೋಸ್ಟ್ ಮಾಸ್ಟರ್ಸ್ ಕ್ಲಬ್ ಸ್ಥಾಪಿಸಲಾಗಿದೆ. ಐಎಂಇಆರ್ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಈ ಕ್ಲಬ್ ಸ್ಥಾಪಿಸುವ ಬಗ್ಗೆ ದೂರದೃಷ್ಟಿ ಹೊಂದಿದ್ದರು. ಈಗ ಖ್ಯಾತ ವೈದ್ಯ ಡಾ. ಕಮಲಾಕರ ಅಚರೇಕರ ಕ್ಲಬ್ ಸ್ಥಾಪನೆಯಾಗಲು ಕಾರಣೀಭೂತರಾಗಿದ್ದಾರೆ. ಟೋಸ್ಟ್ ಮಾಸ್ಟರ್ಸ್ ಕ್ಲಬ್ ಮನ್ನಣೆ ಗಳಿಸಿದ ಅಂತಾರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಯಾಗಿದ್ದು ಸದಸ್ಯರಲ್ಲಿ ಆತ್ಮವಿಶ್ವಾಸ, ಸಂವನಹಕಲೆ ಬೆಳೆಸಲು ಪೂರಕವಾಗಿ ಕೆಲಸ ಮಾಡುತ್ತಿದೆ.

Related Articles

Back to top button