Latest

ಡಿಕ್ಕಿ: ಹೊತ್ತಿ ಉರಿದ ಬೈಕ್, ಟ್ರಕ್, ಇಲ್ಲಿದೆ ವೀಡಿಯೋ

ಪ್ರಗತಿವಾಹಿನಿ  ಸುದ್ದಿ,  ಬೆಳಗಾವಿ:
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಕತಿ ಸಮೀಪ  ಇಂದು ಮಧ್ಯಾಹ್ನ ಬೈಕ್ ಮತ್ತು ಟ್ರಕ್ ನಡುವೆ ಡಿಕ್ಕಿ ಉಂಟಾಗಿ ಎರಡೂ ವಾಹನಗಳು ಹೊತ್ತಿ ಉರಿದಿವೆ.
ಕಣಬರ್ಗಿಯಿಂದ ಇಂಡಾಲ್ ಮಾರ್ಗವಾಗಿ ಕಡೋಲಿಗೆ ಹೋಗುತ್ತಿದ್ದ, ಮೂವರು ಪ್ರಯಾಣಿಸುತ್ತಿದ್ದ ಬೈಕ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಟ್ರಕ್ ಕೆಳಗೆ ಬೈಕ್ ಸಿಕ್ಕಿಹಾಕಿಕೊಂಡು  ಬೆಂಕಿ ಕಾಣಿಸಿಕೊಂಡಿದೆ. ಎರಡೂ ವಾಹನಗಳು  ಸುಟ್ಟು ಕರಕಲಾಗಿವೆ. ಬೈಕ್ ನಲ್ಲಿದ್ದ ಮೂವರು ಗಾಯಗೊಂಡಿದ್ದು,  ಟ್ರಕ್‌ನಲ್ಲಿದ್ದವರು  ಇಳಿದು ಜೀವ ಉಳಿಸಿಕೊಂಡಿದ್ದಾರೆ. ಕಡೋಲಿ ಗ್ರಾಮದ ಸುನಿಲ ಶಿವಾಜಿ ಬೋಗನೆ (೨೬), ವಿವೇಕ ಕೃಷ್ಣಾ ಬಿರ್ಜೆ(೧೬) ಮತ್ತು ರಿತೇಶ ಪಾಟೀಲ (೨೦) ಗಾಯಗೊಂಡಿದ್ದಾರೆ. 
 ಮಹಾರಾಷ್ಟ್ರ ಮೂಲದ ಟ್ರಕ್ ಭಸ್ಮವಾಗಿದ್ದು,  ೧೦ಲಕ್ಷ ರೂ.ಗೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಸಂಚಾರ ಉತ್ತರ ಠಾಣೆ ಪೊಲೀಸರು ಅಂದಾಜಿಸಿದ್ದಾರೆ.  ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button