Belagavi NewsBelgaum NewsKannada NewsKarnataka NewsSports

*ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ವತಿಯಿಂದ ಜಿಲ್ಲೆಯ 18 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ ಏಪ್ರಿಲ್ 15 2026ರಿಂದ ಬಾಸ್ಕೆಟ್ ಬಾಲ್ ಕ್ರೀಡಾ ಪಟುಗಳಿಗೆ ಹಾಗೂ ವೀಲಚೇರ್ ಕ್ರೀಡಾಪಟುಗಳಿಗೆ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿರುತ್ತದೆ.

18 ವರ್ಷದೊಳಗಿನ ಆಸಕ್ತ ಬಾಲಕ/ಬಾಲಕಿಯರು ಏ.14 2026ರ ಒಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದ್ದು, ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

Home add -Advt

ಹೆಚ್ಚಿನ ವಿವರಗಳಿಗಾಗಿ ಬಾಸ್ಕೆಟ್‌ಬಾಲ್ ತರಬೇತಿದಾರ ವಿ.ಎಸ್.ಪಾಟೀಲ ಇವರ ದೂರವಾಣಿ ಸಂಖ್ಯೆ 8317456301ಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button