*ಪ್ರತಿಭಟನೆ ನಿಲ್ಲಿಸಿ*; *ಅಧಿವೇಶನದ ಬಳಿಕ ನಿಮಗೆ ಸಹಿ ಸುದ್ದಿ ಕೊಡುತ್ತೇವೆ*: *ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಸಚಿವರ ಮನವಿ*

ಪ್ರಗತಿವಾಹಿನಿ ಸುದ್ದಿ: ಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸರ್ಕಾರದ ಮಾತಿಗೆ ಗೌರವ ನೀಡಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಕೂಡಲೆ ಕೈ ಬಿಡಬೇಕು ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಮನವಿ ಮಾಡಿದ್ದಾರೆ.
ಬೀದರ್ನಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಜೊತೆ ನಡೆದ ಸಂಧಾನ ವಿಫಲದ ಬಗ್ಗೆ ಪ್ರತಿಕ್ರಿಯಿಸಿದರು. ಇದೇ ವೇಳೆ, ಗ್ರಾಮ ಮಟ್ಟದಲ್ಲಿ ನಮ್ಮ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದು, ಅವರ ಬಗ್ಗೆ ನಮಗೆ ವಿಶೇಷ ಕಾಳಜಿ ಇದೆ. ಕೇಂದ್ರ ಸರ್ಕಾರ 2,000 ರೂ. ಬಿಟ್ಟು ಒಂದು ನೈಯಾ ಫೈಸಾ ಕೊಟ್ಟಿಲ್ಲ. ಹೀಗಾಗಿ ನಮ್ಮ ಸರ್ಕಾರದ 5,000 ರೂ. ನೀಡುತ್ತಿದೆ. ಇನ್ನೂ 15,000 ರೂ. ಬೇಡಿಕೆ ಬಗ್ಗೆ ನಾನು ಸಿಎಂ ಜೊತೆ ದೀರ್ಘಕಾಲ ಚೆರ್ಚೆ ನಡೆಸಿದ್ದೇನೆ ಎಂದರು.
ಈ ಅಧಿವೇಶನ ಮುಗಿದ ಬಳಿಕ ಸಚಿವರು ಮತ್ತು ಅಧಿಕಾರಿಗಳ ಜೊತೆ ಸೇರಿ ಚರ್ಚೆ ಮಾಡಿ ನಿಮಗೆ ಸಿಹಿ ಸುದ್ದಿ ಕೊಡುತ್ತೇನೆ. ಅಧಿವೇಶನವಾದ ಬಳಿಕ ಮಾಡಿಲ್ಲ ಎಂದರೆ ಮತ್ತೆ ನೀವು ಪ್ರತಿಭಟನೆ ಮಾಡಲು ಅವಕಾಶವಿದೆ. ಸರ್ಕಾರದಿಂದ ನಾವು ಕೇಂದ್ರದ ಸಚಿವರಿಗೆ ಮತ್ತು ಪ್ರಧಾನಿಗೆ ಪತ್ರ ಬರೆಯುತ್ತಿದ್ದೆನೆ. ಕೇಂದ್ರ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಬಗ್ಗೆ ಕಾಳಜಿ ಇಲ್ಲ ಎಂದರೆ ನಮಗೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಮೇಲೆ ನಂಬಿಕೆ ಇಟ್ಟು ನಮಗೆ ಕಾಲಾವಕಾಶ ನೀಡಬೇಕು. ಹೀಗಾಗಿ ಈ ಕೂಡಲೇ ಮುಷ್ಕರ ಕೈ ಬಿಡುವಂತೆ ಆಶಾ ಕಾರ್ಯಕರ್ತೆಯರಿಗೆ ಮನವಿ ಮಾಡಿದರು.




