
ಪ್ರಗತಿವಾಹಿನಿ ಸುದ್ದಿ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಗೆ ನಟಿ ರಮ್ಯಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಳೆದ 6 ದಿನಗಳಿಂದ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತಂತೆ ನಟಿ ರಮ್ಯಾ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಆಶಾ ಕಾರ್ಯಕರ್ತರ ಕೊಡುಗೆ ಅಪಾರ. ಅವರಿಗೆ ನ್ಯಾಯಯುತ, ಗೌರವಾನ್ವಿತ ವೇತನ ಮತ್ತು ಸಮಯಕ್ಕೆ ಸರಿಯಾಗಿ ವೇತನ ಸಿಗಬೇಕು. ಸರ್ಕಾರದ ಭರವಸೆ ಶೀಘ್ರದಲ್ಲೇ ನಿರ್ಧಾರವಾಗಲಿದೆ ಎಂದು ನಾನು ಭಾವಿಸುತ್ತೇನೆಂದು ರಮ್ಯಾ ಹೇಳಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳು:
– 15,000 ರೂಪಾಯಿ ನಿಶ್ಚಿತ ಮಾಸಿಕ ಗೌರವಧನ
– ಸಮಸ್ತ ಆ್ಯಪ್ ಮೂಲಕ ಒತ್ತಾಯದ ಮೊಬೈಲ್ ಕೆಲಸ ಕೈಬಿಡಬೇಕು
– ನಿವೃತ್ತರಾಗಿರುವವರಿಗೆ ಬಾಕಿ ಇಡಿಗಂಟು ಬಿಡುಗಡೆ ಮಾಡಬೇಕು
– ಆಶಾ ನಿಧಿ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು
– ಸುಗಮಕಾರರ ಮರುನೇಮಕ & ಬಾಕಿ ವೇತನ ಪಾವತಿಸಬೇಕು
– ಎನ್‌ಐಒಎಸ್ ತರಬೇತಿ ಪ್ರೋತ್ಸಾಹಧನ ನೀಡಬೇಕು
– ತೀವ್ರ ಕಾಯಿಲೆ ಚಿಕಿತ್ಸಾ ಅವಧಿಯಲ್ಲಿ 3 ತಿಂಗಳ ಗೌರವಧನ
– ಸೇವಾ ನಿವೃತ್ತಿ ಇಡಿಗಂಟನ್ನು ಬಂಗಾಳ ಮಾದರಿ 5 ಲಕ್ಷಕ್ಕೆ ಹೆಚ್ಚಿಸಬೇಕು



