Latest

ತುಲಾಭಾರದ ವೇಳೆ ಬಿದ್ದು ಶಶಿ ತರೂರ್ ಗೆ ಗಾಯ

ಪ್ರಗತಿವಾಹಿನಿ ಸುದ್ದಿ, ತಿರುವನಂತಪುರ:

ದೇವಾಲಯದಲ್ಲಿ ತುಲಾಭಾರ ಸೇವೆ ಸಲ್ಲಿಕೆ ವೇಳೆ ಆಯತಪ್ಪಿ ಬಿದ್ದು ಕಾಂಗ್ರೆಸ್ ನಾಯಕ ಶಶಿ ತರೂರ್ ಗಾಯಗೊಡಿದ್ದಾರೆ. ಅವರ ತಲೆಗೆ ಗಂಭೀರ ಪೆಟ್ಟಾಗಿದ್ದು, 11 ಹೊಲಿಗೆ ಹಾಕಲಾಗಿದೆ.


ಜಿಲ್ಲೆಯ ಗಾಂಧಾರಿ ಅಮ್ಮನ್ ದೇಗುಲಕ್ಕೆ ಭೇಟಿ ನೀಡಿದ ಇಲ್ಲಿನ ಲೋಕಸಭಾ ಚುನಾವಣಾ ಅಭ್ಯರ್ಥಿ ತರೂರ್, ತುಲಾಭಾರ ಸೇವೆ ನಡೆಸಿದರು. ಅವರ ತೂಕದಷ್ಟೇ ಹಣ್ಣು ಹಂಪಲು ಅರ್ಪಣೆ ಮಾಡಲು ಅವರು ಮುಂದಾಗಿದ್ದರು.
ಕೂಡಲೇ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ವಿವಿಧ ತಪಾಸಣೆಗಾಗಿ ಅವರನ್ನು ವೈದ್ಯಕೀಯ ಕಾಲೇಜು ಅಸ್ಪತ್ರೆಗೆ ದಾಖಲಿಸಲಾಗಿದೆ.
ಶಶಿ ತರೂರ್ ಪ್ರಾಣಪಾಯದಿಂದ ಪಾರಾಗಿದ್ದು, ಶೀಘ್ರವೇ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ

Related Articles

Back to top button