ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಭಾರತ ದೇಶವನ್ನು ಇಡಿ ವಿಶ್ವವೆ ಮಾನ್ಯ ಮಾಡುವಂತಹ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದರಿಂದ ವಿಶ್ವಮಾನ್ಯ ಅಗ್ರನಾಯಕರಾಗಿದ್ದಾರೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಸುರೇಶ ಅಂಗಡಿ ಹೇಳಿದರು.
ಸ್ಥಳೀಯ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಅರಬಾವಿ ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ.’ಪ್ರಬುದ್ದರ ಗೋಷ್ಠಿ’ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ಮೂರು ಅವಧಿಯಲ್ಲಿ ಬೆಳಗಾವಿಯಲ್ಲಿ ಅಂಬೇಡ್ಕರ ಭವನ ನಿರ್ಮಾಣ, ಸ್ಮಾರ್ಟ ಸಿಟಿ ಕಾಮಗಾರಿ, ಪಾಸ್ಪೋರ್ಟ ಕೇಂದ್ರ ಸೇರಿದಂತೆ ಜಾರಿಗೊಳಿಸಿದ ಕಾರ್ಯಗಳ ಬಗ್ಗೆ ತಿಳಿಸಿದರು.
ಕೇಂದ್ರ ಸರಕಾರದ ಎಲ್ಲಾ ಸೌಲಭ್ಯಗಳನ್ನು ತಂದುಕೊಟ್ಟಿದ್ದು, ಪ್ರಧಾನಿಯವರು ಮಾಡಿದ ಜನಧನ ಖಾತೆ, ಮುದ್ರಾ ಸಾಲ, ಉಜ್ವಲ, ಆಯುಷ್ಮಾನ ಭಾರತ ಆರೋಗ್ಯ ಸೌಲಭ್ಯ, ಕಾರ್ಮಿಕರಿಗೆ ವಿಶ್ರಾಂತಿ ಯೋಜನೆ, ಸಂವಿಧಾನ ತಿದ್ದುಪಡಿ ಮಾಡಿ ಹಿಂದುಳಿದ ವರ್ಗಗಳಿಗೆ ಶೇ.೧೦ರಷ್ಟು ಸೌಲಭ್ಯ, ೫ ಲಕ್ಷ ರೂ ಉತ್ಪನ್ನಕ್ಕೆ ಮತ್ತು ೪೦ಲಕ್ಷ ವ್ಯವಹಾರಕ್ಕೆ ತೆರಿಗೆ ವಿನಾಯಿತಿ ಸೌಲಭ್ಯಗಳನ್ನು ನೀಡಿದ್ದಾರೆ. ಕಳೆದ ಮೂರು ಅವಧಿಗೆ ನನ್ನನ್ನು ಬಹು ಮತದಿಂದ ಆಯ್ಕೆ ಮಾಡಿದಂತೆ ಈ ಚುನಾವಣೆಯಲ್ಲೂ ನಾಲ್ಕನೆ ಅವದಿಗೆ ಅತ್ಯಂತ ಬಹು ಮತದಿಂದ ಚುನಾಯಿಸಿ ಎಂದು ಹೇಳಿದರು.
ಪ್ರಬುದ್ದ ಗೋಷ್ಠಿಯ ಮಾರ್ಗದರ್ಶಕರಾದ ವಿಶ್ವೆಶ್ವರರಾಜ ಭಟ್ಟ ಮಾತನಾಡಿ, ಪ್ರಬುದ್ದ ಮತದಾರರು ಒಬ್ಬರು ೧೦೦ ಮತಗಳನ್ನು ಹಾಕಿಸುವ ಸಂಕಲ್ಪ ಮಾಡಿ, ಪ್ರಧಾನಿ ಮೋದಿಯವರು ೫ ವರ್ಷದ ಆಡಳಿತದಲ್ಲಿ ಮಾಡಿದ ಸಾಧನೆಗಳ ಬಗ್ಗೆ ಸುದೀರ್ಘವಗಿ ಹೇಳಿ ಮೋದಿಯವರು ಮಾಡಿದ ಕಾರ್ಯಗಳಿಗೆ ಆರಂಭವಿದೆ, ಅಂತ್ಯ ಮಾತ್ರವಿಲ್ಲಎಂದರು.
ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಮಾದರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಬಿಜೆಪಿ ಅರಬಾಂವಿ ಮಂಡಲ ಅಧ್ಯಕ್ಷ ಸುಭಾಸ ಪಾಟೀಲ, ಶಾಸಕರ ಪ್ರತಿನಿಧಿ ದಾಸಪ್ಪ ನಾಯ್ಕ, ಜಿ.ಪಂ ಸದಸ್ಯ ಗೋವಿಂದ ಕೊಪ್ಪದ, ಸಂತೋಷ ಸೋನವಾಲ್ಕರ, ರವೀಂದ್ರ ಸೋನವಾಲ್ಕರ, ಗಿರೀಶ ಡವಳೇಶ್ವರ, ಮಲ್ಲು ಡವಳೇಶ್ವರ, ಸುಭಾಸ ಸಣ್ಣಕ್ಕಿ, ಹಣಮಂತ ಗುಡ್ಲಮನಿ, ಕೆ.ಎಲ್.ಹುಣಶ್ಯಾಳ, ಡಾ.ಎಸ್.ಎಸ್.ಪಾಟೀಲ, ಹಣಮಂತ ತೇರದಾಳ, ಚೇತನ ನಿಶಾನಿಮಠ, ನವೀನ ನಿಶಾನಿಮಠ, ಹಣಮಂತ ಸತರಡ್ಡಿ, ಗಫಾರ ಡಾಂಗೆ, ಅನ್ವರ ನದಾಫ, ಶಿವು ಪಿರೋಜಿ, ಮಲ್ಲಪ್ಪ ನೇಮಗೌಡರ, ಕೃಷ್ಣಾ ಗಾಡಿವಡ್ಡರ, ನಂಜುಂಡಿ ಸರ್ವಿ ಹಾಗು ನೂರಾರು ಕಾರ್ಯಕರ್ತರು ಇದ್ದರು.