ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಜವಾಹರ ನವೋದಯ ಪ್ರವೇಶ ಪರೀಕ್ಷೆಗಳು ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಜರುಗಿದವು. ಪ್ರವೇಶ ಬಯಸಿ ಅರ್ಜಿಸಲ್ಲಿಸಿದ 2,699 ಮಕ್ಕಳಲ್ಲಿ 374 ಗೈರಾಗಿ 2325 ಮಕ್ಕಳು ಪರೀಕ್ಷೆ ಬರೆಯುವ ಮೂಲಕ ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಭಾಗವಹಿಸಿರುವುದಾಗಿ ಮೂಡಲಗಿ ಬಿ.ಇ.ಒ ಅಜೀತ ಮನ್ನಿಕೇರಿ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಜರುಗಿದ ಜವಾಹರ ನವೋದಯ ಪ್ರವೇಶ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು. ಮಗುವಿನಲ್ಲಿ ಸ್ಪರ್ಧಾ ಮನೋಭಾವ ಬೆಳೆಸಬೇಕಾದರೆ ಹೆಚ್ಚು ಹೆಚ್ಚು ಪರೀಕ್ಷೆಗಳಿಗೆ ಹಾಜರಾಗುವ ಮೂಲಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಾದ್ಯವಾಗುವುದು. ಮಗುವಿನಲ್ಲಿರುವ ಸುಪ್ತ ಪ್ರತಿಭೆಗೆ ಶಿಕ್ಷಕರ ಪಾಲಕರ ಪೋಷಕರ ಪ್ರೋತ್ಸಾಹ ಬೇಕು. ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೆ ಆಸ್ತಿಯನ್ನಾಗಿಸಬೇಕು. ಮುಂಬರುವ ದಿನಗಳಲ್ಲಿ ಸ್ಪರ್ಧಾತ್ಮಕತೆ ಇದ್ದರೆ ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಗಳ ನಿರ್ಮಾಣ ಕಾರ್ಯ ನಮ್ಮಿಂದಾಗುವುದು ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಯನ್ನು ಕೋಥಳಿ ನವೋದಯ ಶಾಲೆಯ ಡಿ.ಎಲ್.ಒ ಅನುರಾಧಾ ಕೊಳ್ಳಿ, ದೀಪಕ ಬನಸಾಲ, ಚೈತ್ರಾ ಮಿಥಲಿ, ಇಸಿಒ ಟಿ ಕರಿಬಸವರಾಜು, ಬಿ.ಆರ್.ಪಿ ಕೆ.ಎಲ್.ಮೀಶಿ, ಪರೀಕ್ಷಾಧಿಕ್ಷಕರಾಗಿ ಗೀತಾ ಕರಗಣ್ಣಿ, ಜಿ.ಎಲ್ ಕೋಳಿ, ಎಸ್ ಆರ್ ಬಿದರಿ, ಎಸ್ ಎಮ್ ಗುಗ್ಗರಿ, ನೀಲಮ್ಮ ಭೋವಿ, ಎನ್ ಬಿ ನಿಪ್ಪಾಣಿ, ಎಸ್ ಎಮ್ ಸೊನ್ನದ ಕಾರ್ಯನಿರ್ವಹಿಸಿದರು.
ಮುಂಜಾಗೃತ ಕ್ರಮವಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು ಸ್ಥಳೀಯ ಪೋಲಿಸ್ ಠಾಣೆಯಿಂದ ಸೂಕ್ತ ಪೋಲಿಸ್ ಬಂಧೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ