ಪ್ರೇಯಸಿಯ ತಾಯಿಗೆ ಕಿಡ್ನಿ ಕೊಟ್ಟ, ಬೇರೊಬ್ಬನನ್ನು ಮದುವೆಯಾದಳು

ಪ್ರಗತಿ ವಾಹಿನಿ ಸುದ್ದಿ: ಮೆಕ್ಸಿಕೊ:  ಪ್ರೇಮದ ಪರಾಕಾಷ್ಠೆಯಲ್ಲಿ ವ್ಯಕ್ತಿಯೊಬ್ಬ ಪ್ರಿಯತಮೆಯ ತಾಯಿಗೆ ತನ್ನ ಕಿಡ್ನಿಯನ್ನೇ ದಾನ ಮಾಡಿದ್ದ. ಆದರೆ ಪ್ರಿಯತಮೆ ಒಂದೇ ತಿಂಗಳಲ್ಲಿ ಬೇರೊಬ್ಬನೊಂದಿಗೆ ಮದುವೆಯಾದ ವಿದ್ಯಮಾನ ಮೆಕ್ಸಿಕೊದಲ್ಲಿ ನಡೆದಿದೆ.

ಮೆಕ್ಸಿಕೊದ ಯುಜಿಯೆಲ್ ಮಾರ್ಟಿನೆಜ್ ಕಿಡ್ನಿ ದಾನ ಮಾಡಿದ ವ್ಯಕ್ತಿಯಾಗಿದ್ದಾನೆ. ಈತ ಪ್ರೀತಿ ಮಾಡುತ್ತಿದ್ದ ಹುಡುಗಿಯ ತಾಯಿಗೆ ಕಿಡ್ನಿ ತೊಂದರೆ ಕಾಣಿಸಿಕೊಂಡಿತ್ತು. ವೈದ್ಯರು ಕಿಡ್ನಿ ಕಸಿ ಮಾಡುವ ಸಲಹೆ ನೀಡಿದ್ದರು. ಪ್ರೀತಿ ಮಾಡಿದ ಹುಡುಗಿಯ ತಾಯಿಗೆ ಯುಜಿಯೆಲ್ ಮಾರ್ಟಿನೆಜ್ ತನ್ನ ಕಿಡ್ನಿಯನ್ನೇ ದಾನ ಮಾಡಿದ. ಆದರೆ ಇದಾದ ಒಂದೇ ತಿಂಗಳಲ್ಲಿ ಯುವತಿ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ.

Home add -Advt

ಈ ನೋವನ್ನು ಯುಜಿಯೆಲ್ ಮಾರ್ಟಿನೇಜ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾನೆ. ಸೋಫಾದ ಮೇಲೆ ಮಲಗಿ ಬೇಸರದ ಮುಖ ಹೊತ್ತ ತನ್ನ ಫೋಟೊ ಸಹ ಹಾಕಿಕೊಂಡಿದ್ದಾನೆ. ಈ ನಡುವೆ ಯುಜಿಲೆಜ್ ಮಾರ್ಟಿನೆಜ್‌ನ ಟ್ವೀಟ್‌ಗೆ ಕೆಲವರು ಇನ್ನೊಮ್ಮೆ ಇಂಥಹ ತಪ್ಪು ಮಾಡಬೇಡ ಎಂದು ಕೀಟಲೆಯ ಮೆಸೇಜ್ ಕೂಡ ಮಾಡಿದ್ದಾರೆ.

ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು

Related Articles

Back to top button