ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಶಿವಬಸವನಗರದ ಭರತನಾಟ್ಯಕಲಾವಿದೆ ಪುಷ್ಕರಣಿ ಪಿ. ಪೂಜಾರಿ ಶನಿವಾರ (ಮೇ 18) ರಂಗಪ್ರವೇಶ ಮಾಡಲಿದ್ದಾರೆ.
ಪುಷ್ಕರಣಿ ರವಿ ನೃತ್ಯಾಲಯ ಕಲಾಮಂದಿರದ ಟಿ.ರವೀಂದ್ರ ಶರ್ಮ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ಬೆಳಗಾವಿಯ ಬಿ.ಎಸ್.ಜೀರಗೆ ಸಭಾಭವನದಲ್ಲಿ ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಅರಣ್ಯ ಮತ್ತು ಪರಿಸರ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ ಜಾರಕಿಹೊಳಿ, ಶಾಸಕ ಅಭಯ ಪಾಟೀಲ, ನೂಪುರ ಕಲಾವಿದರೂ, ಮೈಸೂರಿನ ಸಾಂಸ್ಕೃತಿಕ ಟ್ರಸ್ಟ್ ನ ನಿರ್ದೇಶಕರೂ ಆಗಿರುವ ಪ್ರೊ.ಕೆ.ರಾಮಮೂರ್ತಿ ರಾವ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಗೌರವ ಅತಿಥಿಗಳಾಗಿ ಸೇಂಟ್ ಮೇರಿಸ್ ಹೈಸ್ಕೂಲ್ ಮುಖ್ಯಾಧ್ಯಾಪಕ ಪಿ.ಪಿ.ಆಳ್ವಾರೀಸ್, ರೋಟರಿ ಕ್ಲಬ್ ಮಾಜಿ ಗವರ್ನರ್ ಅವಿನಾಶ ಪೋತದಾರ, ಡೆಕ್ಕನ್ ಮೆಡಿಕಲ್ ಸೆಂಟರ್ ನ ಡಾ.ರಮೇಶ ದೊಡ್ಡಣ್ಣವರ್, ಹೊಟೆಲ್ ಉದ್ಯಮಿಗಳಾದ ವಿಠ್ಠಲ ಹೆಗಡೆ, ವಿಜಯ ಸಾಲಿಯಾನ್ ಆಗಮಿಸಲಿದ್ದಾರೆ ಎಂದು ಪುಷ್ಕರಣಿ ಅವರ ಪಾಲಕರಾದ ಪ್ರಕಾಶ ಪೂಜಾರಿ ಮತ್ತು ಮಲ್ಲಿಕಾ ಪ್ರಕಾಶ ತಿಳಿಸಿದ್ದಾರೆ.
ಟಿ.ರವೀಂದ್ರ ಶರ್ಮಾ ಮತ್ತು ಧನ್ಯಶ್ರೀ ಚಕ್ರಪಾಣಿ ಸರಳಾಯ ನಟುವಾಂಗ ನುಡಿಸಲಿದ್ದು, ರೋಹಿತ್ ಭಟ್ ಉಪ್ಪೂರು ಹಾಡುಗಾರಿಕೆ, ವಿ.ಆರ್.ಚಂದ್ರಶೇಖರ ಮೃದಂಗ, ಜಯರಾಮ ಕಿಕ್ಕೇರಿ ಕೊಳಲು, ಅನಿರುದ್ಧ ನಾಡಿಗ್ ವಯೋಲಿನ್ ನುಡಿಸುವರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ