Kannada NewsKarnataka NewsLatest

*ಸಾಫ್ಟ್ ವೇರ್ ಉದ್ಯೋಗಿಯ ಮನೆಯಲ್ಲಿ ಅರ್ಧ ಕೆಜಿ ಚಿನ್ನ ದರೋಡೆ*

ಪ್ರಗತಿವಾಹಿನಿ ಸುದ್ದಿ: ಸಾಫ್ಟ್ ವೇರ್ ಉದ್ಯೋಗಿಯ ಮನೆ ಬೀಗ ಮೂರಿದು ಅರ್ಧ ಕೆಜಿ ಚಿನ್ನ ದರೋಡೆ ಮಾಡಿ ಕಳ್ಳರು ಪರಾರಿಯಾಗಿದ್ದಾರೆ.

ರಾಮನಗರ ಜಿಲ್ಲೆಯ ಟೌನ್ ವ್ಯಾಪ್ತಿಯ ದ್ಯಾವರಸೇಗೌಡನದೊಡ್ಡಿ ಬಳಿ ಕಳ್ಳತನ ನಡೆದಿದೆ. ಸಾಫ್ಟ್ವೇರ್ ಉದ್ಯೋಗಿ ಲಿಖಿತ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ, ಬೀಗ ಮುರಿದು ಚಿನ್ನ ದೋಚಿದ್ದಾರೆ. 

Home add -Advt

ಸಂಜೆ ಮನೆಗೆ ಬಂದ ಲಿಖಿತ್ ಬೀಗ ಮುರಿದಿದ್ದನ್ನು ಕಂಡು ಶಾಕ್ ಆಗಿದ್ದಾರೆ. ಬಳಿಕ ಬೆಡ್ ರೂಂನ ಕಬೋರ್ಡ್ ಅನ್ನು ನೋಡಿದ್ದಾಗ ಚಿನ್ನಾಭರಣ ಕಳ್ಳತನ ಆಗಿರುವುದು ಗೊತ್ತಾಗಿದೆ. ದರೋಡೆಕೊರರು ಕಳ್ಳತನ ಮಾಡಿ, ಸಿಸಿಟಿವಿ ಡಿವಿಆರ್ ಕೂಡ ಹೊತ್ತುಕೊಂಡು ಹೋಗಿದ್ದಾರೆ. 

ಸ್ಥಳಕ್ಕೆ ರಾಮನಗರ ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ಖದೀಮರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಅಕ್ಕಪಕ್ಕದ ಮನೆ ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ.

Related Articles

Back to top button