Latest

ನಿನ್ನೆ, ಇಂದು 1,605 ಜನರಿಗೆ 1,60,500 ರೂ. ತಲೆ ದಂಡ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಹೆಲ್ಮೆಟ್ ವಿರುದ್ಧ ಮತ್ತೆ ಬೆಳಗಾವಿ ಪೊಲೀಸರು ತೀವ್ರ ಕಾರ್ಯಾಚರಣೆ ಆರಂಭಿಸಿದ್ದು, 2 ದಿನದಲ್ಲಿ 1,605 ಜನರಿಗೆ ತಲೆ ದಂಡ ಬಿದ್ದಿದೆ. ಒಟ್ಟೂ 1,60,500 ರೂ. ತೆತ್ತಿದ್ದಾರೆ.

ಬೇಸಿಗೆ ಬಿರು ಬಿಸಿಲಿನ ಹಿನ್ನೆಲೆಯಲ್ಲಿ ಹೆಲ್ಮೆಟ್ ಗೆ ವಿನಾಯಿತಿ ನೀಡದಿದ್ದರೂ, ಕಾರ್ಯಾಚರಣೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲಾಗಿತ್ತು. ಆದರೆ, ಕಳೆದ ವಾರ ಮತ್ತೆ ಸಾರ್ವಜನಿಕ ಪ್ರಕಟಣೆ ನೀಡಿದ ಪೊಲೀಸರು ನಿನ್ನೆಯಿಂದ ತಾವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ.

ನಿನ್ನೆ 882 ಜನರಿಗೆ 88,200 ರೂ. (ತಲಾ 100 ರೂ.) ದಂಡ ವಿಧಿಸಿದ್ದ ಪೊಲೀಸರು, ಇಂದು 723 ಜನರಿಂದ 72,300 ರೂ. ವಸೂಲು ಮಾಡಿದ್ದಾರೆ. 

ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button