ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಖ್ಯಾತ ಸಾಹಿತಿ, ನಿತ್ಯೋತ್ಸವ ಕವಿ ಡಾ. ನಿಸ್ಸಾರ್ ಅಹಮದ್ ಅವರ ಪತ್ನಿ ಶಾನವಾಜ್ ಬೇಗಮ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 77ವರ್ಷ ವಯಸ್ಸಾಗಿತ್ತು.
ತೀವ್ರ ಅನಾರೋಗ್ಯದಿಂದಾಗಿ 15 ದಿನದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ನಿಸ್ಸಾರ್ ಅಹಮದ್ ಮತ್ತು 4 ಮಕ್ಕಳನ್ನು ಅವರು ಅಗಲಿದ್ದಾರೆ.
“ನನ್ನ ಎಲ್ಲಾ ಸಾಹಿತ್ಯಾಸಕ್ಕೆ ನನ್ನ ಪತ್ನಿ ಸ್ಪೂರ್ತಿಯಾಗಿದ್ದರು. ನನ್ನ ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ನಾನು ಯಾವತ್ತೂ ಮರೆಯಲಾರೆ” ಎಂದು ನಿಸ್ಸಾರ ಅಹಮದ್ ಭಾವುಕರಾಗಿ ನುಡಿದರು.
ಶಿಕ್ಷಕಿಯಾಗಿದ್ದ ಅವರು 16 ವರ್ಷದ ಹಿಂದೆ ನಿವೃತ್ತರಾಗಿದ್ದರು. ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 2 ಗಂಟೆಗೆ ದೂರದರ್ಶನ ಕೇಂದ್ರದ ಬಳಿಯ ಸ್ಮಶಾನದಲ್ಲಿ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ