Kannada NewsLatestSports

 ಇಂಗ್ಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ ತಂಡ 

 ಪ್ರಗತಿವಾಹಿನಿ ಸುದ್ದಿ, *ಮುಂಬೈ:* ರನ್ ಮಳೆಗೆ ಸಾಕ್ಷಿಯಾಗಿದ ಟಿ20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ 7 ರನ್ ಗಳಿಂದ ಇಂಗ್ಲೆಂಡ್ ಎದುರು ರೋಚಕ ಗೆಲುವು ದಾಖಲಿಸಿತು.

ಇದರೊಂದಿಗೆ ಎರಡು ಬಾರಿಯ ಚಾಂಪಿಯನ್ ಭಾರತ ತಂಡ ನಾಲ್ಕನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿತು. 

Home add -Advt

ವಾಂಖೆಡೆ ಮೈದಾನದಲ್ಲಿ ಗುರುವಾರ ನಡೆದ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಆರಂಭಿಕ ಸಂಜು ಸ್ಯಾಮ್ಸನ್ (89ರನ್, 42 ಎಸೆತ, 8 ಬೌಂಡರಿ, 7 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ಗೆ 253 ರನ್ ಪೇರಿಸಿತು.‌ ಈ ಬೃಹತ್ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ತಂಡ, ಜಾಕೊಭ್ ಬೆತ್ಹೆಲ್ (105 ರನ್, 48 ಎಸೆತ, 8 ಬೌಂಡರಿ,7 ಸಿಕ್ಸರ್) ಬಿರುಸಿನ ಶತಕದ ಹೊರತಾಗಿಯೂ 7 ‌ವಿಕೆಟ್ ಗೆ 246 ರನ್ ಕಲೆಹಾಕಲಷ್ಟೆ ಶಕ್ತವಾಯಿತು. 

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಭಾನುವಾರ ಅಹಮದಾಬಾದ್ ನಲ್ಲಿ ಪ್ರಶಸ್ತಿಗಾಗಿ ಸೆಣೆಸಲಿವೆ.‌

Related Articles

Back to top button