ಪ್ರಗತಿವಾಹಿನಿ ಸುದ್ದಿ, ಅಗಸಗಿ
ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಲಕ್ಷ್ಮಿ ನಗರ ಬಾಲಕ ಅಥರ್ವ ರವಿ ವರ್ತೆ ( ೧೪) ಮಂಗಳವಾರ ಮದ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮದಲ್ಲಿ ನೇಣು ಹಾಕಿಕೊಂಡಿದ್ದಾನೆ.
ಮರಾಠಿ ಮಾಧ್ಯಮ 9ನೇ ತರಗತಿಯಲ್ಲಿ ಓದುತ್ತಿದ್ದ ಅಥರ್ವ ದುಷ್ಚಟಗಳಿಗೆ ಅಂಟುಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ತಂದೆ ಇಲ್ಲದ ಈತ ಒಬ್ಬನೇ ಮಗನಾಗಿದ್ದನು. ತಾಯಿ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದು, ಕುಟುಂಬ ನಿರ್ವಹಿಸಲು ಕಷ್ಟಕರವಾಗಿತ್ತು . ಈ ನಡುವೆ ಅಥರ್ವ ಹಣಕ್ಕಾಗಿ ಮನೆಯಲ್ಲಿ ಪೀಡಿಸುತ್ತಿದ್ದನೆಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ಆತನಿಗೆ ಅಂಟಿಕೊಂಡಿರುವ ದುಶ್ಚಟಗಳೆ ಕಾರಣವಾಗಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ