ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಗಡಿಯಲ್ಲಿ ಗುಂಡಿನ ದಾಳಿ ನಡೆಸಿದೆ.
ಇದರಿಂದಾಗಿ, ಕಳೆದ 3 ದಿನದಲ್ಲಿ 20ನೇ ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದಂತಾಗಿದೆ.
ಈ ಮಧ್ಯೆ ಪಾಕಿಸ್ತಾನ ಎಲ್ಲಾ ಸೈನಿಕರ ಹಾಗೂ ತುರ್ತು ಸೇವೆಗಳ ಸಿಬ್ಬಂದಿ ರಜೆ ರದ್ದುಗೊಳಿಸಿದೆ. ತಕ್ಷಣ ಕರ್ತವ್ಯಕ್ಕೆ ಮರಳುವಂತೆ ಆದೇಶಿಸಲಾಗಿದೆ.
ಭಾರತದಲ್ಲೂ ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದ್ದು, ಸಂಜೆ ಪ್ರಧಾನಿ ನಿವಾಸದಲ್ಲಿ ಸಚಿವಸಂಪುಟ ಸಭೆ ಕರೆಯಲಾಗಿದೆ.