ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಭಾರತ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಹಿನ್ನೆಲೆಯಲ್ಲಿ ನಲುಗಿ ಹೋಗಿರುವ ಪಾಕಿಸ್ತಾನ ತುರ್ತು ಉನ್ನತ ಮಟ್ಟದ ಸಭೆ ನಡೆಸಿದೆ.
ಓದಿ: ರಾತ್ರೋ ರಾತ್ರಿ ಸರ್ಜಿಕಲ್ ಸ್ಟ್ರೈಕ್
ಭಾರತದ ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟಿರುವ ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿ ನಡೆಸಬೇಕೋ ಅಥವಾ ಭಾರತದೊಂದಿಗೆ ಸಂದಾನದ ಪ್ರಯತ್ನ ನಡೆಸುವುದೋ ಎನ್ನುವ ಕುರಿತು ಸಭೆಯಲ್ಲಿ ಚರ್ಚೆ ನಡೆಯುತ್ತಿದೆ.
ಬೆಳಗಿನಜಾವ 3.30ರ ವೇಳೆಗೆ ನಡೆದಿರುವ ದಾಳಿಿಯಿಂದ ಸತ್ತ ಉಗ್ರರ ಸಂಖ್ಯೆ ಎಷ್ಟು ಎನ್ನುವುದು ಇನ್ನೂ ಖಚಿತವಾಗಿಲ್ಲ. 250ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾಗಿ ಹೇಳಲಾಗುತ್ತಿದೆಯಾದರೂ, ಆದರೆ ಪಾಕಿಸ್ತಾನ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದಿದೆ. ತಮ್ಮ ಸೇನಾಪಡೆಗಳು ಭಾರತೀಯ ವಾಯುಪಡೆಯನ್ನು ಹಿಮ್ಮೆಟ್ಟಿವೆ ಎಂದಿದೆ.
ಈ ಮಧ್ಯೆ ಭಾರತ ಕೂಡ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿದೆ. ಯಾವುದೇ ರೀತಿಯ ಪ್ರತಿದಾಳಿ ಪಾಕಿಸ್ತಾನದಿಂದ ನಡೆಯಬಹುದು ಎನ್ನುವ ಕಾರಣಕ್ಕಾಗಿ ಕಟ್ಟೆಚ್ಚರ ವಹಿಸಲಾಗಿದೆ.
ಪಾಕಿಸ್ತಾನದ ಉನ್ನತ ಮಟ್ಟದ ಸಭೆ ತೆಗೆದುಕೊಳ್ಳುವ ನಿರ್ಣಯ ಕುತೂಹಲ ಮೂಡಿಸಿದ್ದು, ಭಾರತ ಕೂಡ ಅಧಿಕೃತವಾಗಿ ಪ್ರತಿಕ್ರಿಯೆ ನೀಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ