Latest

ಪ್ರತಿ ಪ್ರಜೆ ಸಂವಿಧಾನವನ್ನು ಗೌರವಿಸಬೇಕು -ವಿಜಯ ಸೋನವಾಲ್ಕರ

   ಪ್ರಗತಿವಾಹಿನಿ ಸುದ್ದಿ, ಮೂಡಲಗಿ

ದೇಶದ ಪ್ರತಿಯೊಬ್ಬ ಪ್ರಜೆಯು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದಾಗ ಮಾತ್ರ ದೇಶದ ಅಭಿವೃದ್ಧಿಯಾಗುವುದು ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ್ ಹೇಳಿದರು.
ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ೭೦ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ವಿಶ್ವಕ್ಕೆ ಮಾದರಿಯಾಗಿದ್ದು, ಸಂವಿಧಾನವನ್ನು ಗೌರವಿಸಿ ದೇಶಾಭಿಮಾನ ಬೆಳೆಸಿಕೊಂಡು ಸತ್ಪ್ರಜೆಗಳಾಗುವುದು ಅವಶ್ಯವಿದೆ ಎಂದರು.
ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರೊ. ಶಿವಕುಮಾರ ಎ. ಶಾಸ್ತ್ರೀಮಠ, ವಿದ್ಯಾರ್ಥಿಗಳಾದ ಶೈಲಾಜ ಭಾಗೋಜಿ, ವಾಣಿಶ್ರೀ ಢವಳೇಶ್ವರ ಮಾತನಾಡಿದರು.

ಸಂಸ್ಥೆಯ ನಿರ್ದೇಶಕರಾದ ವೆಂಕಟೇಶ ಸೋನವಾಲ್ಕರ್, ಪ್ರದೀಪ ಲಂಕೆಪ್ಪನ್ನವರ, ಅನೀಲ ಸತರಡ್ಡಿ, ರವಿ ನಂದಗಾವ ಅತಿಥಿಯಾಗಿದ್ದರು. ಉಪಪ್ರಾಚಾರ್ಯ ಎ.ಆರ್. ಶೇಗುಣಶಿ, ಬಿಪಿಇಡಿ ಪ್ರಾಚಾರ್ಯ ಎಂ.ಕೆ. ಕಂಕಣವಾಡಿ, ಮುಖ್ಯ ಶಿಕ್ಷಕ ಗಜಾನನ ಮಾನೆ ವೇದಿಕೆಯಲ್ಲಿದ್ದರು. ಎನ್‌ಸಿಸಿ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನವು ಗಮನಸೆಳೆಯಿತು. ಡಾ. ಆರ್.ಎ. ಶಾಸ್ತ್ರೀಮಠ ಸ್ವಾಗತಿಸಿದರು, ಆರ್.ಎಂ. ಕಾಂಬಳೆ ನಿರೂಪಿಸಿದರು, ಪ್ರಾಚಾರ್ಯ ಪ್ರೊ.ಎಸ್.ಡಿ. ತಳವಾರ ವಂದಿಸಿದರು.

ಇಲ್ಲಿಯ ಕರುನಾಡು ಸೈನಿಕ ತರಭೇತಿ ಕೇಂದ್ರದಲ್ಲಿ ನಡೆದ ೭೦ನೇ ಗಣರಾಜ್ಯೋತ್ಸವ ನಿವೃತ್ತ ಶಿಕ್ಷಕ ಕೆ.ಆರ್.ಕೋತ್ತಲ ಅವರು ಧ್ವಜಾರೋಹಣ ನೇರವೇರಿಸಿ ಮಾತನಾಡಿ ಸ್ವಾತಂತ್ಯ ಪಡೆಯಬೇಕಾದರೆ ನಮ್ಮ ಹಿರಿಯರು ಸಾಕಷ್ಟು ಶ್ರಮ ವಹಿಸಿದ್ಧಾರೆ. ಅದರಂತೆ ಡಾ ಅಂಭೇಡ್ಕರ ಅವರು ದೇಶದ ಜನತೆ ಸಮಪಾಲು ಸಮಬಾಳು ತತ್ವದಲ್ಲಿ ಸಂವಿಧಾನ ರಚಿಸಿದ್ದು ಅದಕ್ಕೆ ಅನುಗುಣವಾಗಿರಬೇಕು ಎಂದರು.  ಉಮೇಶ ಬೆಳಕೂಡ, ಕರುನಾಡು ಸೈನಿಕ ತರಭೇತಿ ಕೇಂದ್ರದ ವ್ಯವಸ್ಥಾಪಕ ಶಂಕರ ತುಕ್ಕನವರ ಮಾತನಾಡಿದರು. ಶಿವಾನಂದ ಮುಧೋಳ, ಮಲ್ಲಿಕಾರ್ಜುನ ಬಳಿಗಾರ, ಮಲ್ಲಪ್ಪ ಸಾಯನ್ನವರ,ಬಸವರಾಜ ಕಲಗೇರಿ, ಅಸ್ಗರ ಇನಾಮದಾರ, ಸುರಗಾಂವಿ, ವಿಶ್ವನಾಥ ಕೊಳಗಿ, ಮುಕುಂದ ಕುಲಕರ್ಣಿ, ಆನಂದ ವಂಟಗುಡಿ ಮತ್ತು ತರಭೇತಿ ಕೇಂದ್ರ ಶಿಭಿರಾರ್ಥಿಗಳು ಉಪಸ್ಥಿತರಿದ್ದರು.

ಕುಲಗೋಡ ಗ್ರಾಮದ ಶ್ರೀ ಸಿದ್ಧರೂಢ ಅರ್ಬನ್ ಕೋಆಫ್  ಸೊಸೈಟಿಯಲ್ಲಿ ಜರುಗಿದ ೭೦ನೇ ಗಣರಾಜ್ಯೋತ್ಸವದ ದ್ವಜಾರೊಹಣವನ್ನು ಸಂಸ್ಥೆಯ ಅಧ್ಯಕ್ಷ ರಾಚಪ್ಪ ಅಂಗಡಿ ನೆರವೇರಿಸಿದರು. ದುಂಡಪ್ಪ ಗಿಡ್ಡಾಳಿ, ಮಹಾಲಿಂಗಪ್ಪ ಪಟ್ಟಣಶೆಟ್ಟಿ, ಮುರಗೇಪ್ಪ ಯಕ್ಸಂಬಿ, ವಿವೇಕಾನಂದ ಭಜಂತ್ರಿ, ಹಣಮಂತ ಕಂಬಾರ ಮಹಾಂತೇಶ ಅಂದಾನಿ ಮತ್ತಿತರು ಭಾಗವಹಿಸಿದ್ದರು.
ಮಸಗುಪ್ಪಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವದ ದ್ವಜಾರೋಹಣವನ್ನು ಗ್ರಾ.ಪಂ ಅಧ್ಯಕ್ಷೆ ಸಾಂವಕ್ಕಾ ಲ.ಬೊಜನ್ನವರ ನೆರವೇರಿಸಿದರು. ಉಪಾಧ್ಯಕ್ಷ ಭಿಮಪ್ಪ ಅಶಿರೋಟಿ, ಸದಸ್ಯರಾದ ಸಾತಪ್ಪ ಕೊಳದುರ್ಗಿ, ಕೆಂಚಪ್ಪಾ ಶಿಂತ್ರಿ, ಮುರಗೆಪ್ಪ ಗಾಡವಿ, ಲಕ್ಷ್ಮೀ ಅಶಿರೋಟಿ, ಶಾಂತಾ ಮೆಣಶಿ, ಲಕ್ಷ್ಮವ್ವಾ ತಿಗಡಿ, ರೆಣುಕಾ ಬಡ್ನಿಂಗೋಳ, ನಿಂಗಪ್ಪ ಹೆಜಗಾರ, ಚಂದ್ರವ್ವಾ ಮಂಡರ, ಪಿಡಿಒ ಎಸ್.ಎಲ್.ಬಬಲಿ, ಕಾರ್ಯದರ್ಶಿ ಎಸ್.ಎ.ಮುರಗೋಡ ಮತ್ತಿತರು ಇದ್ದರು.

ಶಿವಚೈತನ್ಯ ಶಾಲೆಯಲ್ಲಿ ೭೦ ನೇ ಗಣರಾಜ್ಯೋತ್ಸವ
ರಂಗಾಪೂರ ಗ್ರಾಮದ ಶಿವಚೈತನ್ಯ ಶಾಲೆಯಲ್ಲಿ ೭೦ನೇ ಗಣರಾಜ್ಯೋತ್ಸವದಲ್ಲಿ ಸಂಸ್ಥೆಯ ಅಧ್ಯಕ್ಷ ಶರಣಶ್ರೀ ಲಕ್ಕಣ್ಣ ಶರಣರು ಧ್ವಜಾರೊಹಣ ನೆರವೇರಿಸಿ ಮಾತನಾಡಿ, ಬ್ರಿಟಿಷರ ದಾಸ್ಯ ಸಂಕೋಲೆ ಬಿಡಿಸಿಕೊಂಡ ಭಾರತ ತನ್ನದೇ ಸಂವಿಧಾನವನ್ನು ರೂಪಿಸಿ ಜಾರಿಗೆ ತಂದ ಶುಭ ದಿನವೇ ಈ ಗಣರಾಜ್ಯೋತ್ಸವ. ಒಕ್ಕೂಟ ವ್ಯವಸ್ಥೆಯಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡು ಬಹುಶೃತ ಸಮಾಜ ಸಂಸ್ಥಾಪನೆಗೆ ನೀರೆರೆಯುವುದೆ ಸಂವಿಧಾನದ ಪ್ರಧಾನ ಆಶಯವೆಂದರು. ಸಂದರ್ಭದಲ್ಲಿ ಹಿರಿಯರಾದ ಲಕ್ಕಪ್ಪಾ ತೇರದಾಳ, ರಾಮಪ್ಪ ಮಸರಗುಪ್ಪಿ, ಶಿವಪ್ಪ ಬನವಿ, ಉಪಾಧ್ಯಕ್ಷರಾದ ಶಿವಬಸಪ್ಪ ಡೊಂಬರ, ದುಂಡಪ್ಪಾ ಪಾಟೀಲ, ರವಿ ಪಾಟೀಲ, ರೇಹಮಾನ್ ನದಾಫ್, ಈರಪ್ಪ ಡೊಂಬರ, ಪುಂಡಲೀಕ ಡೊಂಬರ ಉಪಸ್ಥಿತರಿದ್ದರು. ಎಂ.ಎಸ್. ಕರವಾಡಿ ನಿರೂಪಿಸಿದರು, ಮು.ಶಿ. ವಿಜಯ ಡೊಂಬರ ಸ್ವಾಗತಿಸಿದರು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button