Latest

ಪ್ರಧಾನಿ ರಾಜಿನಾಮೆ, ಲೋಕಸಭೆ ವಿಸರ್ಜನೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದ ಸಹೋದ್ಯಾಗಿಗಳೊಂದಿಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, 17ನೇ ಲೋಕಸಭೆಯನ್ನು ವಿಸರ್ಜಿಸಲಾಗಿದೆ.

ಇಂದು ಸಂಜೆ ರಾಷ್ಟ್ರಪತಿಯನ್ನು ಭೇಟಿ ಮಾಡಿದ ಮೋದಿ ಸಚಿವ ಸಂಪುಟ ಸಭೆಯ ನಿರ್ಣಯವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದರು. 

ಹೊಸ ಸರಕಾರ ಅಸ್ಥಿತ್ವಕ್ಕೆ ಬರುವವರೆಗೆ ಮುಂದುವರಿಯುವಂತೆ ರಾಷ್ಟ್ರಪತಿಗಳು ನರೇಂದ್ರ ಮೋದಿಗೆ ಸೂಚಿಸಿದರು. 

Home add -Advt

ನಿಯಮಾವಳಿ ಪ್ರಕಾರ ಹಾಲಿ ಲೋಕಸಭೆಯನ್ನು ವಿಸರ್ಜಿಸಿ, ಹೊಸದಾಗಿ ಸರಕಾರ ರಚಿಸಬೇಕಾಗುತ್ತದೆ. ಲೋಕಸಭೆಯಲ್ಲಿ ಅತಿ ದೊಡ್ಡ ಪಕ್ಷವನ್ನು ರಾಷ್ಟ್ರಪತಿಗಳು ಸರಕಾರ ರಚಿಸಲು ಆಮಂತ್ರಿಸುವರು. 

ಬಿಜೆಪಿ 303 ಸ್ಥಾನ ಗೆದ್ದು ದೊಡ್ಡ ಪಕ್ಷವೆನಿಸಿದರೆ, ಕಾಂಗ್ರೆಸ್ 51 ಸ್ಥಾನಗಳೊಂದಿಗೆ ಎರಡನೇ ದೊಡ್ಡ ಪಕ್ಷವಾಗಿದೆ. ಇದೇ 29 ಅಥವಾ 30ರಂದು ನೂತನ ಸರಕಾರ ಅಸ್ಥಿತ್ವಕ್ಕೆ ಬರಲಿದೆ.

Related Articles

Back to top button