Latest

19 ವಯಸ್ಸಿನ 3 ವಾಹನ ಕಳ್ಳರ ಬಂಧನ; 3.30 ಲಕ್ಷ ರೂ. 8 ಬೈಕ್ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮೂವರು ವಾಹನ ಕಳ್ಳರನ್ನು ಬಂಧಿಸಿರುವ ಬೆಳಗಾವಿ ಶಹಾಪುರ ಠಾಣೆ ಪೊಲೀಸರು 3.30ಲಕ್ಷ ರೂ. ಮೌಲ್ಯದ 8 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Home add -Advt

ಮಾರ್ಕೆಟ್ ಎಸಿಪಿ ಎನ್.ವಿ.ಬರಮನಿ ಉಸ್ತುವಾರಿ ಹಾಗೂ  ಶಹಾಪುರ ಇನಸ್ಪೆಕ್ಟರ್ ಭರತ್ ಎಸ್.ಆರ್. ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.

 ಮನೋಹರ ಅರುಣ ಜಾಧವ ಎನ್ನುವವರು ತಮ್ಮ ಮೋಟಾರ್ ಸೈಕಲ್ ಕಳುವಾದ ಬಗ್ಗೆ ಮೇ.21ರಂದು ದೂರು ನೀಡಿದ್ದರು.  ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಲಾಯಿತು. 

  ಧಾರವಾಡ ನಾಕಾ ಹತ್ತಿರ ಕಳುವಾದ ಮೋಟಾರ ಸೈಕಲ್ ಸಮೇತ ನಿಂತಿದ್ದ ವಡಗಾವಿ ದೋರಗಲ್ಲಿಯ 19 ವರ್ಷದ ಓಂಕಾರ ಮಾರುತಿ ಜಾಧವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭಾರತನಗರದ ಶುಭಂ ದತ್ತಾ ಬಿರ್ಜೆ ಮತ್ತು  ನಾರಾಯಣ ಶಿವಾನಂದ ಜಂತಿಕಟ್ಟಿ ಈತನೊಂದಿಗೆ ಕಳ್ಳತನದಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡ. 

 ಮೂವರೂ ಸೇರಿ ಶಹಾಪೂರ ಠಾಣಾ ವ್ಯಾಪ್ತಿಯಲ್ಲಿ 5 ಹಿರೋ ಹೊಂಡಾ ಸ್ಲ್ಪೆಂಡರ್, 1 ಯಮಹ, 1 ಅಪಾಚಿ, ಹಾಗೂ 1 ಹೊಂಡಾ ಆಕ್ಟಿವಾ ಮೋಟರ್ ಸೈಕಲ್ ಹೀಗೆ ಒಟ್ಟು  3.30 ಲಕ್ಷ ರೂ. ಮೌಲ್ಯದ 8 ಮೋಟಾರ ಸೈಕಲ್ ಗಳನ್ನು ಕಳುವು ಮಾಡಿದ್ದಾಗಿ ಒಪ್ಪಿಕೊಂಡ.

 ಎಲ್ಲ ಆರೋಪಿಗಳಿಂದ ಮೋಟರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.. ಈ ಪತ್ತೆ ಕಾರ್ಯದಲ್ಲಿ  ಶಹಾಪೂರ ಪೊಲೀಸ್ ಠಾಣೆ  ಪಿಐ ಭರತ ಎಸ್. ಆರ್. ,   ಉದಯ ಟಿ ಪಾಟೀಲ ಎ.ಎಸ್.ಐ., ಕೆ. ಎಮ್. ರಾಮಚಂದ್ರಪ್ಪ ಎ.ಎಸ್.ಐ.,  ಐ. ಎಮ್. ಬಡಿಗೇರ,  ಶ್ಯಾಮಸುಂದರ ದೊಡನಾಯ್ಕರ,   ಸುರೇಶ ಕಾಂಬಳೆ ಪಾಲ್ಗೊಂಡಿದ್ದರು. 

Related Articles

Back to top button