Latest

ಪ್ರಾಕ್ಸಿಸ್-೨ಕೆ೧೯ ; ರಾಷ್ಟ್ರಮಟ್ಟದ ತಾಂತ್ರಿಕ ಸಮ್ಮೇಳನ ಮಾ.೧ ರಿಂದ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:
ಪಟ್ಟಣದ ಕೆಎಲ್‌ಇ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ ಮತ್ತು ಕೌಶಲಗಳನ್ನು ಹೆಚ್ಚಿಸಲು ಪ್ರತಿ ಎರಡು ವರ್ಷಕೊಮ್ಮೆ ’ಪ್ರಾಕ್ಸೀಸ್’ ತಾಂತ್ರಿಕ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಈ ಸಲ ಐದನೇ  ಬಾರಿಗೆ ಪ್ರಾಕ್ಸಿಸ್-೨ಕೆ೧೯ ಎರಡು ದಿನಗಳ ರಾಷ್ಟ್ರಮಟ್ಟದ ತಾಂತ್ರಿಕ ಸಮ್ಮೇಳನ ಮಾ.೧ ಹಾಗೂ ೨ ರಂದು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳಿಂದ ಸುಮಾರು ೨೦೦೦ಕ್ಕೂ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ತಿಳಿಸಿದರು.
ಪತ್ರಿಕಾಗೋಷ್ಟೀಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಸಿವಿಲ್ ವಿಭಾಗದಿಂದ ಪ್ರಬಂಧ ಮಂಡನೆ, ಕ್ಲ್ಯಾಶ್ ಆಫ್ ಸಿವಿಲಿಯನ್ಸ್ (ಕ್ವಿಜ್ ಸ್ಪರ್ಧೆ), ಸ್ಟ್ರಕ್ಚರ್ ಮಾಡೆಲಿಂಗ್, ಸಿವಿಲ್ ಚಾಂಪ್, ಸರ್ವೆ ಹಂಟ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮೆಕ್ಯಾನಿಕಲ್ ವಿಭಾಗದಿಂದ ಪ್ರಬಂಧ ಮಂಡನೆ, ಟೆಕ್ನಿಕಲ್ ಕ್ವಿಜ್, ಮೇಕ್ ಅ ಸ್ಟಾರ್, ಕಾರ್ ಮೆಕ್ಯಾನಿಕ್ ಸಿಮ್ಯುಲೇಟರ್, ೩ಡಿ ಮಾಡೆಲಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದಿಂದ ಪ್ರಬಂಧ ಮಂಡನೆ, ಟೆಕ್ನೋ ಫಿಲಿಯಾ (ಕ್ವಿಜ್ ಸ್ಪರ್ಧೆ), ಸರ್ಕಿಟ್ ಡಿಬಗ್ಗಿಂಗ್, ಲಾಜಿಕ್ ಮೇನಿಯಾ ಹಾಗೂ ವರ್ಚುವಲ್ ಪ್ಲೆಸಮೆಂಟ್ ಸ್ಪರ್ಧೆಗಳು ಹಾಗೂಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಪ್ರಬಂಧ ಮಂಡನೆ, ಟು ಬೀ ಡೆನಿಸ್ ರೀಚೆ, ಟೆಕ್ನಿಕಲ್ ಟ್ರೆಜರ ಹಂಟ್, ಕ್ವಿಜ್ ಬೌಲ್, ಡಿ ಬಿ ಮೆನಿಯಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಪೋಸ್ಟರ್ ಪ್ರಸೆಂಟೇಶನ್, ಡಿಬೇಟ್ ಕಾಂಪಿಟಿಶನ್ ಮತ್ತು ನೃತ್ಯಂ-೨ಕೆ೧೯ ಏರ್ಪಡಿಸಲಾಗಿದ್ದು, ಸಮ್ಮೇಳನದಲ್ಲಿ ಒಟ್ಟು ೨೩ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಾ.೧ ರಂದು ಬೆಳಗ್ಗೆ ೧೦ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಪಜಾಕಾ  ಕನ್ಸಲ್ಟನ್ಸಿ ಸರ್ವಿಸ್‌ನ ಸಿಇಒ ಶಾಮಸುಂದರ ಎಚ್.ಎಸ್., ಇಸ್ರೊ ಮಾಜಿ ಸಂಚಾಲಕ ವಿಷ್ಣು ಮಿಸಾಳೆ ಆಗಮಿಸಲಿದ್ದಾರೆ. ಕೆಎಲ್‌ಇ ಆಡಳಿತ ಮಂಡಳಿ ಸದಸ್ಯ ಬಸವರಾಜ ಆರ್. ಪಾಟೀಲ ಅಧ್ಷಕ್ಷತೆ ವಹಿಸಲಿದ್ದಾರೆ ಎಂದು ಡಾ. ಪ್ರಸಾದ ರಾಂಪೂರೆ ಹೇಳಿದರು.
ಹೆಚ್ಚಿನ ಮಾಹಿತಿಗೆ ವೆಬ್ಸೈಟ್  www.klecet.edu.in/praxis    ಮೊ: ೯೭೪೨೪೯೬೪೯೬ / ೯೦೧೯೨೫೭೭೭೦ ಸಂಪರ್ಕಿಸಬಹುದು.
ವಿಭಾಗ ಮುಖ್ಯಸ್ಥರಾದ ಪ್ರೊ. ವಿ.ಎಂ. ಬುದ್ಯಾಳ, ಡಾ. ಸುಭಾಷ ಮೇಟಿ, ಪ್ರೊ. ಸತೀಶ ಭೋಜನ್ನವರ, ಡಾ. ಸಿದ್ದೇಶ ಎಂ.ಬಿ., ಪ್ರೊ. ಸಚಿನ ಮೆಕ್ಕಳಕಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Articles

Back to top button