ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಫೆಬ್ರವರಿ 1 ರಿಂದ ದೇಶ್ಯಾದ್ಯಂತ ಕೇಬಲ ಚಾನಲ್ ಸೇವೆ ಸ್ಥಗಿತಗೊಳ್ಳಲಿದ್ದು,TRAI ಪ್ರಾಧಿಕಾರ ಆದೇಶದ ಮೇರೆಗೆ ಪ್ರತಿ ಚಾನಲ್ ಗಳಿಗೆ ಆಯ್ಕೆ ಮೂಲಕ ಹಣ ತುಂಬಿ ಟಿವಿ ಚಾನಲ್ ನೋಡಬಹುದಾಗಿದೆ. ಆದ್ದರಿಂದ BRDS ಸಂಸ್ಥೆ ವಿಶೇಷ ದರದ ಪ್ಯಾಕೇಜ್ ರೂಪಿಸಿದೆ ಎಂದು ಬಿಆರ್ ಡಿಎಸ್ ಎಂಡಿ ನಾಗೇಶ ಚಾಬ್ರಿಯಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.
TRAI ಪ್ರಾಧಿಕಾರ ಡಿಸೆಂಬರ್ 29 ರಂದು ದೇಶ್ಯಾದ್ಯಂತ ಹೊಸ ನೀತಿಯನ್ನು ಜಾರಿಗೆ ತರಬೇಕೆಂದು ಆದೇಶ ನೀಡಿತ್ತು. ಹಾಗೂ ಹಂತ ಹಂತವಾಗಿ ಅನುಷ್ಠಾನಕ್ಕೆ ತರಬೇಕೆಂದು ಹೇಳಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆದೇಶ ಆರು ತಿಂಗಳವರೆಗೆ ಮುಂದೊಡಿಸಲಾಗಿದೆ ಎಂಬ ಸಂದೇಶ ಹರಿಬಿಟ್ಟು ಗೊಂದಲ ಸೃಷ್ಟಿಸಲಾಗಿತ್ತು. ಆದರೆ TRAI ಪ್ರಾಧಿಕಾರ ಪೆಬ್ರವರಿ 1 ರಂದು ಈ ಹೊಸ ನೀತಿ ದೇಶ್ಯಾದ್ಯಂತ ಜಾರಿಗೆ ತರಬೇಕೆಂದು ಅಧಿಕೃತವಾಗಿ ಆದೇಶ ನೀಡಿದೆ. ಆದ್ದರಿಂದ ಬಿಆರ್ ಡಿ ಎಸ್ ಸಂಸ್ಥೆ ಈ ಆದೇಶದನ್ವಯ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಕಳೆದ 20 ವರ್ಷಗಳಿಂದ ಬಿಆರ್ ಡಿಎಸ್ ಸಂಸ್ಥೆಯೊಂದಿಗೆ ಸ್ನೇಹ ಹೊಂದಿದ ವೀಕ್ಷಕರಿಗೆ ಯಾವುದೇ ಗೊಂದಲ ಆಗದೆ ಇರುವ ಹಾಗೆ ಕೆಲ ಪ್ಯಾಕೇಜಗಳನ್ನು ಜಾರಿಗೆ ತರಲಾಗಿದೆ ಎಂದರು.
ಬಿಆರ್ ಡಿಎಸ್ ಸಂಸ್ಥೆ ಕರ್ನಾಟಕ, ಗೋವಾ,ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಅದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೇ 12.5 ಲಕ್ಷ ವೀಕ್ಷಕರು ಇದ್ದಾರೆ. ಆದ್ದರಿಂದ ಮೂರು ರಾಜ್ಯಗಳಲ್ಲಿ ಇರುವ ಎಲ್ಲ ಭಾಷೆಯ ವೀಕ್ಷಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ವಿಶೇಷ ಪ್ಯಾಕೇಜಗಳನ್ನು ನೀಡಲು ತಯಾರಿ ಮಾಡಿಕೊಂಡಿದೆ ಎಂದರು. ಇದರಲ್ಲಿ 153 ರೂಪಾಯಿಯಲ್ಲಿ ಜಿ ಎಸ್ ಟಿ ಸಹಿತ ನೂರು ಫ್ರೀ ಚಾನಲ್ ಗಳನ್ನು ನೀಡಲು TRAI ಪ್ರಾಧಿಕಾರ ನಿರ್ಧರಿಸಿದ್ದು, ಬಿಆರ್ ಡಿಎಸ್ ಸಂಸ್ಥೆ ಬಡ ಜನರಿಗೆ ಕನ್ನಡದ ಎಲ್ಲ ಚಾನಲ್ ವೀಕ್ಷಿಸಲು 215 ರೂಪಾಯಿಯಲ್ಲಿ ಸಿಲ್ವರ ಪ್ಯಾಕ್, ಜಾರಿಗೆ ತಂದಿದೆ ಎಂದರು. ಅದೆ ರೀತಿ 295 ರೂಪಾಯಿಯಲ್ಲಿ ಗೊಲ್ಡ ಪ್ಯಾಕ್ ಹಾಗೂ ಕನ್ನಡ ಮತ್ತು ಮರಾಠಿ ಚಾನಲ್ ವೀಕ್ಷಿಸಲು 392 ರೂಪಾಯಿಯಲ್ಲಿ ಡೈಮಂಡ್ ಸೇರಿದಂತೆ 445 ರೂಪಾಯಿಯಲ್ಲಿ ಪ್ಲ್ಯಾಟಿನಮ್ ಎಂಬ ವಿವಿಧ ಪ್ಯಾಕೇಜಗಳನ್ನು ಜಾರಿಗೆ ತರಲಾಗಿದೆ ಎಂದರು. ಇದರಿಂದ ಎಲ್ಲ ವೀಕ್ಷಕರಿಗೆ ತಮ್ಮ ಇಷ್ಟದ ಪ್ರಕಾರ ಚಾನಲ್ ಗಳು ಲಭ್ಯವಾಗಲಿದ್ದು, ಬಿಆರ್ ಡಿ ಎಸ್ ಸಂಸ್ಥೆ ತಮ್ಮ ವೀಕ್ಷಕರಿಗೆ ಡಿಸ್ಕೌಂಟ ಕೂಡ ನೀಡಲು ನಿರ್ಧರಿಸಿದೆ ಎಂದರು. ಇನ್ನು ಈ ಪ್ಯಾಕೇಜ್ ಗಳನ್ನು ತಮ್ಮ ಟಿವಿ ಗಳಿಗೆ ಅಳವಡಿಸಿಕೊಳ್ಳಬೇಕಾದರೆ TRAI ಪ್ರಾಧಿಕಾರ ಆದೇಶ ದಂತೆ ಕನಿಷ್ಠ 153 ರೂಪಾಯಿ ಭರಿಸಲೇ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇಂದು ಬೆಳಗಾವಿ ಸಂಪಾದಕ ರಾಜು ಪಾಟೀಲ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ