Latest

ಬಂಡಿಗಣಿ ಮಠದ ಅನ್ನ ದಾಸೋಹ ಶ್ಲಾಘನೀಯ : ಸ್ವಾಮಿಜಿ

ಪ್ರಗತಿವಾಹಿನಿ ಸುದ್ದಿ, ಮಾಂಜರಿ
 ಯಡೂರಿನ ಜಾತ್ರೆಯ ಯಶಸ್ಸಿನಲ್ಲಿ ಕಳೆದ ೫ ವರ್ಷಗಳಿಂದ ನಿರಂತರ ಅನ್ನದಾಸೋಹ ನಡೆಸಿಕೊಂಡು ಬರುತ್ತಿರುವ ಬಂಡಿಗಣಿ ಮಠದ ಸಿಂಹಪಾಲು ಇದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಹಾಗೂ ಯಡೂರಿನ ಕಾಡಸಿದ್ಧೇಶ್ವರ ಮಠದ ಪೀಠಾಧಿಕಾರಿ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ ಸಂತಸ ವ್ಯಕ್ತಪಡಿಸಿದರು.
ಯಡೂರ ಗ್ರಾಮದಲ್ಲಿ ಜರುತ್ತಿರುವ ವೀರಭದ್ರೇಶ್ವರ ದೇವರ ವಿಶಾಳಿ ಯಾತ್ರಾ ಮಹೋತ್ಸವದ ಅಂಗವಾಗಿ ಜಮಖಂಡಿ ತಾಲೂಕಿನ ಬಂಡಿಗಣಿ ಗ್ರಾಮದ ನೀಲಮಾಣಿಕಮಠದ ವತಿಯಿಂದ ಆಯೋಜಿಸಿರುವ ನಿರಂತರ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 
ಅನ್ನದಾಸೋಹದ ಜತೆಗೆ ಜಾತ್ರೆಗೆ ಬರುವ ಎಲ್ಲ ಮಹಿಳೆಯರ ಉಡಿ ತುಂಬುವ ವಿಶೇಷ ಕಾರ್ಯಕ್ರಮ, ಎಲ್ಲ ಭಕ್ತರಿಗೂ ತಾಂಬೂಲ ಕೊಡುವ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.
ಬಂಡಿಗಣಿ ನೀಲಮಾಣಿಕಮಠದ ಅನ್ನದಾನೇಶ್ವರ ಮಹಾಸ್ವಾಮಿಜಿ ಮಾತನಾಡಿ, ೧೯೭೦ ರಿಂದ ಸಣ್ಣ ಪ್ರಮಾಣದಲ್ಲಿ  ದಾಸೋಹ ಪ್ರಾರಂಭಿಸಿದ್ದು ಇಂದು ಮಠಕ್ಕೆ ಬರುವ ಭಕ್ತರ ಸಂಘಟನಾ ಸಹಾಯದಿಂದ ದಿನಾಲು ಮಠದಲ್ಲಿ ನಿರಂತರ ದಾಸೋಹ ನಡೆಸಲಾಗುತ್ತಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button