ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕುಮಾರಸ್ವಾಮಿ ಅವರೇ ಬಜೆಟ್ ಮಂಡಿಸುತ್ತಾರೆ. ಫೆ.8ರಂದೇ ಬಜೆಟ್ ಮಂಡನೆ ಆಗುತ್ತದೆ – ಇದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ ಹೇಳಿಕೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕುಮಾರಸ್ವಾಮಿ ಅವರು ರೈತಪರ ಬಜೆಟ್ ಮಂಡಿಸುತ್ತಾರೆ. ರೈತರಿಗೆ ಒಳ್ಳೆಯ ಬಜೆಟ್ ನೀಡುತ್ತೇವೆ ಎಂದರು.
ಸರ್ಕಾರ ಬೀಳುವುದಿಲ್ಲ. ಗಾಬರಿ ಆಗುವಂಥ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ.
ನಮ್ಮ ಸರ್ಕಾರಕ್ಕೆ ಏನೂ ಭಯವಿಲ್ಲ. ಬಿಜೆಪಿ ಅಧಿಕಾರ ಸಿಗುತ್ತದೆಂಬ ಭ್ರಮೆಯಲ್ಲಿದೆ. ಅವರು ಯಾವ ಹೋಮ ಮಾಡಿದ್ರೂ ಏನೂ ಆಗುವುದಿಲ್ಲ ಎಂದು ರೇವಣ್ಣ ಹೇಳಿದರು.
ಮಾಜಿ ಸಚಿವ ಎ.ಮಂಜು ಹೇಳಿಕೆ ಕುರಿತು ಪ್ರಶ್ನಿಸಿದಾಗ, ಬೆಳಗ್ಗೆ ಬೆಳಗ್ಗೆ ಅವರ ಹೆಸರನ್ನ ಯಾಕೆ ತೆಗಿತೀರಾ? ನಿಮ್ಮ ಬಾಯಿಯಲ್ಲಿ ಅಂಥವರ ಹೆಸರು ಬರಬಾರದು. ನಾನಂತೂ ಅಂಥವರ ಹೆಸರು ಮತ್ತು ಅವರ ಬಗ್ಗೆ ಏನೂ ಮಾತಾಡಲ್ಲ. ಕಾಂಗ್ರೆಸ್ ಮಾಡಿದ ತಪ್ಪಿಗೆ ಹಾಸನದಲ್ಲಿ ಒಂದು ಬಿಜೆಪಿ ಸ್ಥಾನ ಬಂದಿದೆ ಎಂದು ಹರಿಹಾಯ್ದರು.
ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಶಾಸಕರ ಕಿರಿಕಿರಿ ವಿಚಾರದ ಕುರಿತು ಪ್ರಶ್ನಿಸಿದಾಗ, ಎಲ್ಲ ಪಕ್ಷದಲ್ಲೂ ಶಾಸಕರ ಕಿರಿಕಿರಿ ಆಗೇ ಆಗುತ್ತದೆ. ಕುಮಾರಸ್ವಾಮಿ ರಾಜೀನಾಮೆ ಕೊಡುವುದಿಲ್ಲ.ಸಿದ್ದರಾಮಯ್ಯ ಬೆಂಬಲಿತ ಶಾಸಕರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ರಮೇಶ್ ಜಾರಕಿಹೊಳಿ ನಮ್ಮ ಬ್ರದರ್ ಇದ್ದಹಾಗೆ. ರಮೇಶ್ ಗೆ ಕುಮಾರಸ್ವಾಮಿ ಮತ್ತು ನನ್ನ ಜೊತೆ ಒಳ್ಳೆ ಸಂಬಂಧವಿದೆ ಎಂದು ರೇವಣ್ಣ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ